ಕೇಂದ್ರದಿಂದ ಬೋಗಸ್ ಬಜೆಟ್: ಸಂಜಯಗಾಂಧಿ
ಹಾವೇರಿ: ನಿರ್ಮಲ ಸೀತಾರಾಮ ಅವರು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವ ರೀತಿ ಕೊಡುಗೆ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಸಂಜೀವಗಾಂಧಿ ಸಂಜೀವಣ್ಣನವರ ಆರೋಪಿಸಿದ್ದಾರೆ.ರಾಜ್ಯಕ್ಕೆ 19 ಸಂಸದರ ಕೊಡುಗೆ ಏನು, ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆಯನ್ನ ಓದಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲ್ , ಇಂದಿನ ಕೇಂದ್ರ ಸರ್ಕಾರದ ಬಜೆಟ್ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ 2024ರ ನ್ಯಾಯ ಪತ್ರದಲ್ಲಿನ ಕಾಪಿ ಪೇಸ್ಟ್ ಮಾಡಿ ಓದಿದ ಹಾಗೆ ಕಾಣುತ್ತದೆ.ಇದೊಂದು ಬೋಗಸ್ ಬಜೆಟ್ ನಿರ್ಮಲ ಸೀತಾರಾಮನವರು ಹಾಗೂ ಮೋದಿ ಲೆಕ್ಕ ಉಲ್ಟಾ ರೈತರಿಗೆ ಮತ್ತು ನಿರುದ್ಯೋಗಿಗಳಿಗೆ ಮಹಿಳಾ ಉದ್ಯಮಿಗಳಿಗೆ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿ ಮಾಡಬಹುದಿತ್ತು ರಸ್ತೆ ಅಭಿವೃದ್ಧಿ ಮಾಡಲು ಸಂಪೂರ್ಣವಾದ ವಿಫಲವಾಗಿದೆ ನಿರ್ಮಲ ಚಿತ್ತ ನಮ್ಮ ರಾಮನವರ ಬಜೆಟ್ ಕರ್ನಾಟಕಕ್ಕೆ ಯಾವುದೇ ರೀತಿ ಕೊಡುಗೆ ನೀಡಲಿಲ್ಲ ರೈತರ ಹಣ ದ್ವಿಗುಣ ಮಾಡುತ್ತೇನೆ ಅಂತ ಹೇಳಿದರು ಯಾವುದೇ ರೀತಿಯಿಂದ ರೈತರಿಗೆ ಬಿಜೆಪಿ ಸರ್ಕಾರದಿಂದ ಅನುಕೂಲ ಆಗಲೇ ಇಲ್ಲ ಎಂದರು.