Uncategorized
ದೇಶದ ಜಾತ್ಯಾತೀತ ಪಕ್ಷ ಕಾಂಗ್ರೆಸ್:
ಹಾವೇರಿ: ದೇಶದಲ್ಲಿ ಜಾತ್ಯಾತೀತ ಪಕ್ಷ ಎಂದರೆ ಅದು ಕಾಂಗ್ರೆಸ್ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಹೇಳಿದರು.
ಶಿಗ್ಗಾವಿಯಲ್ಲಿ ನಡೆದ ಬೂತ್ ಮಟ್ಟದ ಪದಾಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿ,ಜೆಡಿಎಸ್‌ನವರ ಜಾತ್ಯಾತೀತ ಎಂದುಕೊಂಡು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರು.ಈಗ ದೇಶದಲ್ಲಿ ಉಳಿದಿರುವುದು ಜಾತ್ಯಾತೀತವಾಗಿ ಕಾಂಗ್ರೆಸ್ ಮಾತ್ರ.
ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆಲ್ಲುವಂತ ಕ್ಷೇತ್ರ.ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್‌ನವರೇ ಕಾರಣ ಎಂದು ಮುಖಂಡರು ಹೇಳಿದ್ದಾರೆ.ಟಿಕೆಟ್ ಸಿಗದಿದ್ರೆ ಪಕ್ಷಕ್ಕೆ ದ್ರೋಹ ಮಾಡಿದ್ರೆ ಮತ್ತೆ ಕಾರ್ಯಕರ್ತರ ಪರಿಸ್ಥಿತಿ ಅದೋಗತಿಯಾಗುತ್ತೇ.ಎಲ್ಲಿ ದುಡ್ಡು ಅಲ್ಲಿ ಓಟ್ ಎನ್ನುವಂತಾಗಿದೆ ರಾಜಕಾರಣ.
ಕಳೆದ ಸಲ ಶಿಗ್ಗಾವಿಯಿಂದ ನಿಲ್ಲುವಂತೆ ನನಗೆ ಪಕ್ಷದ ಮುಖಂಡರು ಹೇಳಿದ್ದರು. ಸ್ಥಳೀಯರಿಗೆ ಟಿಕೆಟ್ ನೀಡುವಂತೆ ನಾನು ಹೇಳಿದ್ದೆ.ಬಿಜೆಪಿಯವರ ಸಾಧನೆ ಕೋಮು ಗಲಭೆಯಾಗಿದೆ.ಆಕಾಂಕ್ಷಿಗಳು ಒಂದಾಗಿದ್ರೆ ಪಕ್ಷ ಸೋಲಲು ಸಾಧ್ಯವಿಲ್ಲ.ಕೈ ಮುಗಿದು ಕೇಳುತ್ತೇನೆ ಎಲ್ಲರೂ ಒಂದಾಗಿರಿ ಎಂದರು.