Uncategorized
ಧಾರಾಕಾರ ಮಳೆಗೆ ಹಳ್ಳದಂತಾದ ರಸ್ತೆಗಳು,ಜನಜೀವನ ಅಸ್ತವ್ಯಸ್ತ:

ಹಾವೇರಿ: ಹಾವೇರಿಯಲ್ಲಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಹಳ್ಳದಂತೆ ಹರಿದ ಪರಿಣಾಮ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾದ ಘಟನೆ ಬುಧವಾರ ಸಂಜೆ ನಡೆದಿದೆ.

ಸಂಜೆ 4.45 ರಿಂದ ನಿರಂತರವಾಗಿ ಸುರಿದ ಮಳೆಗೆ ಹಾವೇರಿಯಿಂದ ಹುಬ್ಬಳ್ಳಿ ಸಂಪರ್ಕ ಕಲಿಸ್ಪಸುವ ರಸ್ತೆಯಲ್ಲಿ ನೀರು ತುಂಬಿ ಹಳ್ಳದಂತೆ ಹರಿಯಿತು.ಹಾವೇರಿ ಎಸ್ ಪಿ ಕಚೇರಿ, ಪ್ರವಾಸಿ ಮಂದಿರದ ಮುಂಭಾಗದಲ್ಲಿ ರಸ್ತೆಯೂ ಸಂಪೂರ್ಣ ಮುಳುಗಡೆಯಾಗಿತ್ತು. ಮಳೆ ನೀರಿನಿಂದ ಹೈವೆ ರೋಡ್ ಮುಚ್ಚಿ ಹೋಗಿತ್ತು.ರಸ್ತೆ ಯಾವ್ದು ಗುಂಡಿ ಯಾವ್ದು ಎಂದು ತಿಳಿಯದೆ ವಾಹನ ಸವಾರರು ಪರದಾಡಿದರು.ಮಳೆ ನೀರಿನಿಂದ ವಾಹನಗಳ ಅರ್ಧ ಭಾಗ ಮುಗುಳುಗಡೆಯಾಗಿದ್ದವು.
ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಮೇಲೆ ನಿಂತ ಮಳೆ ನೀರು ತುಂಬಿದ ಪರಿಣಾಮ ಜನ ಹೈರಾಣಾದರು.