ಅಂಧನಿಂದ ಅಂಧರ ಬಾಳಲಿ ಬೆಳಕು ಮೂಡಿಸುವ ಕಾರ್ಯ
ರಾಣೆಬೇನ್ನೂರು: ಅವರೆಲ್ಲ ಜಗತ್ತು ನೋಡಲು ಹಾತೊರೆಯುವ ಜೀವಗಳು. ತಮ್ಮ ಬಾಳಲಿ ಬೆಳಕನ್ನು ಹುಡುಕುತ್ತಿರುವ ಅಂಧರು.ಒಬ್ಬರಿಗೊಬ್ಬರು ಆಸರೆಯಾಗಿ ದಿನವ ದೂಡುತ್ತಿರುವ ವಿಶೇಷಚೇತನರು.ಕತ್ತಲನ್ನು ಕೂಡ ಬೆಳಕೆಂದು ನಂಬಿ ನಡೆಯುವ ಅಂಧರು, ಬದುಕಿನ ನೆಲೆಯನ್ನು ಕಾಣಲು ಆಸರೆ ಬಯಸಿದವರು.ಕಣ್ಣಿಲ್ಲದಿದ್ದರು ಬದುಕಿನ ಕನಸಿಗೆ ರೆಕ್ಕೆ ಕಟ್ಟಿದವರು. ಅವರೆ ಹಾವೇರಿ ಜಿಲ್ಲೆಯ ರಾಣೆಬೆನ್ನುರಿನ ಸಿದ್ದೆಶ್ವರ ನಗರದಲ್ಲಿರುವ ಅಂಧರ ಜೀವ ಬೆಳಕು ಟ್ರಸ್ಟನ ಸದಸ್ಯರು.

ಅಷ್ಟಕ್ಕೂ ಅವರನ್ನು ಜವಾಬ್ದಾರಿಯುತವಾಗಿ ನೋಡಿಕೊಂಡು ಬದುಕು ರೂಪಿಸುತ್ತಿರುವರು ಕೂಡ ಅಂಧರೆ.ಅವರೆ ನಾಗನಗೌಡ ಬಳ್ಳೊಳ್ಳಿ.ಅಂಧರ ಜೀವ ಬೆಳಕು ಟ್ರಸ್ಟನ ಮೂಲಕ ಅಂಧರ ಶಾಲೆಯೊಂದನ್ನು ತೆರೆದಿದ್ದಾರೆ.ಸಂಪೂರ್ಣವಾಗಿ ದಾನಿಗಳ ಸಹಕಾರದಿಂದಲೆ ನಡೆಯುತ್ತಿರುವ ಸಂಸ್ಥೆ ಇದಾಗಿದೆ.ಸರಕಾರದಿಂದ ಯಾವುದೇ ಅನುದಾನ ಪಡೆಯದೆ ನಡೆಯುತ್ತಿರುವ ಸಂಸ್ಥೆ ಇದಾಗಿದೆ.

ಅಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಊಟ ವಸತಿ ಹಾಗೂ ಪ್ರಯಾಣ ವ್ಯವಸ್ಥೆಯನ್ನು ಕೂಡ ಸಂಸ್ಥೆಯೇ ನಿರ್ವಹಿಸುತ್ತೆ.ಅಂಧರೆಂದರೆ ಅವರು ಯಾರಿಗೇನೂ ಕಡಿಮೆ ಇಲ್ಲ.ಸಂಗೀತ ,ಶಿಕ್ಷಣ, ಕಂಪ್ಯೂಟರ್, ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಎಲ್ಲರ ಗಮನ ಸೆಳೆದವರು.ಇತ್ತಿಚಿಗೆ ಇವರ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಗೌರಮ್ಮ ಎನ್ನುವ ಯುಜಿಸಿ ನೆಟ್ ಪರೀಕ್ಷೆ ಪಾಸಾಗಿರೋದು ಹೆಮ್ಮೆಯ ವಿಷಯ. ಇಂದಿಗೂ ದಾನಿಗಳ ಸಹಾಯ ಸಹಕಾರದಿಂದ ನಡೆಯುತ್ತಿರುವ ಸಂಸ್ಥೆಗೆ ನಾವೆಲ್ಲರೂ ಆಸರೆಯಾಗಬೇಕಿದೆ.ಅಂಧರ ಬಾಳಿಗೆ ಬೆಳಕಾಗಬೇಕಿದೆ.ಅವರನ್ನು ನೋಡಿಕೊಳ್ಳುತ್ತಿರುವ ಹೃದಯವಂತ ಸಂಸ್ಥೆಗೆ ಶಕ್ತಿಯಾಗಬೇಕಿದೆ.

ಪ್ರತಿನಿತ್ಯವೂ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಆಶ್ರಯ ಪಡೆದ ಶಿಕ್ಷಣ ಪಡೆಯುತ್ತಿದ್ದಾರೆ.ಅವರಿಗೆಲ್ಲಾ ಊಟ ವಸತಿ ಹಾಗೂ ಸಂಗೀತ ಪರಿಕರಗಳು ಊಟದ ಸಾಮಾನುಗಳ ಅಗತ್ಯವಿದೆ ಹಾಗಾಗಿ ನಾವು ನಿವೆಲ್ಲರೂ ಕೈಲಾದಷ್ಟು ಸಹಾಯ ಮಾಡಿ ಅಂಧರ ಬಾಳಿಗೆ ಬೆಳಕಾಗೋಣ.
ಅವರು ಬದುಕು ಕತ್ತಲೆಯಾದರೂ ಇನ್ನೊಬ್ಬರ ಬದುಕಿಗೆ ಬೆಳಕಾಗಲು ನಾಗನಗೌಡ ಆತೋರೆಯುತ್ತಿದ್ದಾರೆ.ದಾನಿಗಳಿಂದ ನಡೆಯುತ್ತಿರುವ ಈ ಸಂಸ್ಥೆಯ ಮುಖ್ಯಸ್ಥರು ಕೂಡ ಅಂಧರಾಗಿರುವ ಕಾರಣಕ್ಕಾಗಿ ದಾನಿಗಳನ್ನು ಹುಡುಕುವುದು ಕಷ್ಟಕರ ಸಾಧ್ಯವಾಗಿದೆ.ಕತ್ತಲೆಯ ಬಾಳಿಗೆ ಬೆಳಕು ಹುಡುಕಲು ಹೊರಟ ಇವರಿಗೆ ನಾವೆಲ್ಲಾ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆಯಬೇಕಿದೆ.
ಅಂಧನಿಂದ ಅಂಧರ ಜೀವನಕ್ಕೆ ಬೆಳಕು
ಅಂಧರ ಬದುಕಿಗೆ ನೆರವು ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಹತ್ತಾರು ಶಾಲೆಗಳಿರುವುದನ್ನು ನಾವು ನೋಡಿದ್ದೇವೆ. ಆದರೆ ಅಂಧನಿಂದ ಅಂಧರಿಗಾಗಿ ನಡೆಸಲ್ಪಡುವ ವಿಶೇಷ ವಸತಿ ಶಾಲೆಯೊಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿದೆ. ನಾಗನ ಗೌಡ ಬೆಳುಳ್ಳಿ ಮೂಲತಃ ಕುಂದಗೋಳದ ಮಂಡಿಗನಾಳದವರು. ಹುಟ್ಟಿನಿಂದಲೇ ಅಂಧರು, ಬಿ.ಎ.. ಬಿ.ಎಡ್, ವಿದ್ಯಾಭ್ಯಾಸಕ್ಕಾಗಿ ರಾಣೇಬೆನ್ನೂರಿಗೆ ಬಂದ ಇವರು ನಂತರ ಉದ್ಯೋಗದತ್ತ ಮುಖ ಮಾಡುವ ಬದಲು ತಾನು ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬೇಕೆಂಬ ಯೋಚನೆಯಲ್ಲಿದ್ದಾಗ ತಕ್ಷಣ ಇವರಿಗೆ ನೆನಪಾದದ್ದು ತನ್ನಂತೆ ಇರುವ ಅಂಧರು. ಕಳೆದ ನಾಲ್ಕು ವರ್ಷಗಳಿಂದ ರಾಣೇಬೆನ್ನೂರಿನಲ್ಲಿ ಅಂಧರ ಜೀವ ಬೆಳಕು’ ಎಂಬ ಹೆಸರಿನಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯವನ್ನು ಇವರು ಇವರು ನಡೆಸುತ್ತಿದ್ದಾರೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಸುಮಾರು 25 ಮಂದಿ ವಿದ್ಯಾರ್ಥಿನಿಯರು ಇಲ್ಲಿದ್ದಾರೆ. ಊಟ, ವಸತಿ ಸಂಪೂರ್ಣ ಉಚಿತವಾಗಿದ್ದು ಇತರರು ನೀಡುವ ದೇಣಿಗೆಯಿಂದ ಈ ಈ ಸಂಸ್ಥೆ ನಡೆಯುತ್ತಿದೆ. ವಿದ್ಯಾರ್ಥಿನಿಯರಿಗೆ ಬೇಕಾದ ಟ್ಯೂಷನ್ ವ್ಯವಸ್ಥೆಯು ಇಲ್ಲಿದೆ. ಇನ್ನು ವರ್ಷದಲ್ಲಿ ಎರಡು ಬಾರಿ ರಾಜ್ಯದ ಅಂಧರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ವಿವಿಧ ಸ್ಪರ್ಧೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಇವರೆಲ್ಲರ ಜೀವನದ ಬೆಳಕಿಗೆ ಸಾಮಾಜಿಕ ಕಳಕಳಿ ಇರುವಂಥ ನಾವೆಲ್ಲರೂ ಕಣ್ಣಾಗಬೇಕಿದೆ.ಆದಕಾರಣ ಇವರೆಲ್ಲರ ಸ್ವಾಸ್ತ್ಯ ಜೀವನದ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರು ಕೈ ಜೋಡಿಸೋಣ ಸಹಾಯ ಮಾಡೋಣ.
ಸಹಾಯ ಸಹಕಾರ ಮಾಡುವ ಬಯಸುವವರು
ಸಂಪರ್ಕಿಸಬೇಕಾದ ವಿಳಾಸ
ಇದರ ಪ್ರಯೋಜನವನ್ನು ರಾಜ್ಯದಲ್ಲಿರುವ ಇತರ ವಿದ್ಯಾರ್ಥಿನಿಯರು ಪಡೆದುಕೊಳ್ಳಬೇಕೆಂಬುದು ಇವರ ಅಪೇಕ್ಷೆ. ಹೆಚ್ಚಿನ ಮಾಹಿತಿಗಾಗಿ ನಾಗನಗೌಡ ಬೆಳುಳ್ಳಿಯವರನ್ನು ನೀವು ಸಂಪರ್ಕಿಸಬಹುದು.
ಅಂಧರ ಜೀವ ಬೆಳಕು ಟ್ರಸ್ಟ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಪಸ್ಟ ಕ್ರಾಸ ಪಸ್ಟ ಬಿಡ್ಲ್ಡಿಂಗ್ ಸಿದ್ದೆಶ್ವರ ನಗರ ರಾಣೆಬೆನ್ನೂರು ಹಾವೇರಿ
ಅವರ ದೂರವಾಣಿ ಸಂಖ್ಯೆ : +91 95359 51112