ಸಂಘಟನೆಯಿಂದ ಮಾತ್ರ ಸೌಲಭ್ಯ ಪಡೆಯಲು ಸಾಧ್ಯ: ಅನಿತಾ ಡಿಸೋಜಾ
ಹಾನಗಲ್ : ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟನೆ ಅಗತ್ಯ. ಸಂಘಟನೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ರೋಶನಿ ಮತ್ತು ಲೊಯೋಲಾ ಸಂಸ್ಥೆಯ ಅನಿತಾ ಡಿಸೋಜಾ ಹೇಳಿದರು.
ಪಟ್ಟಣದ ಗುರುಭವನದಲ್ಲಿ ನಡೆದ
ಪುಟ್ಟರಾಜ ಗವಾಯಿಗಳ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಯೂನಿಯನ್‌ನ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.ಕಳೆದ ಹಲವು ವರ್ಷಗಳಿಂದ ಸಂಘಟಿತರಾದ ನಿಜವಾದ ಕಾರ್ಮಿಕರು ಯೂನಿಯನ್ ಚನೆ ಮಾಡಿರುವದು ತುಂಬಾ ಸಂತೋಷದ ವಿಷಯವಾಗಿದೆ.ಯೂನಿಯನ್ನಿನ ಎಲ್ಲ ಪದಾಧಿಕಾರಿಗಳು ಒಗ್ಗಟ್ಟಿನಿಂದ ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಮುಂದಾಗಬೇಕು ಎಂದು ತಿಳಿಸಿದರು.
ಹಾನಗಲ್ಲ ತಾಲೂಕಿನಲ್ಲಿ ಕಾರ್ಮಿಕ ಇಲಾಖೆ ಇರದಿದ್ದ ಸಮಯದಲ್ಲಿ,ಜನವೇದಿಕೆಯ ಮುಖಂಡರ ಹೋರಾಟದಿಂದ ಇಂದು ತಾಲೂಕಿನಲ್ಲಿ ಕಾರ್ಮಿಕ ಇಲಾಖೆ ಕಾರ್ಯನಿರ್ವಸುವಂತೆ ಮಾಡಿದ್ದಾರೆ.
ಕಟ್ಟಡ ಕಾರ್ಮಿಕರು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಪ್ರ ಮುಖವಾದ ಪಾತ್ರ ವಹಿಸುತ್ತಾರೆ.ಕಾರ್ಮಿಕರರಿಗೆ ಬಹಳಷ್ಟು ಸಮಸ್ಯೆಗಳಿದ್ದು ಅವುಗಳಿಗೆ ಸ್ಪಂದಿಸುವದು ಸರಕಾರದ ಜವಾಬ್ದಾರಿಯಾಗಿದೆ ಎಂದು ರೋಶಿನಿ ತಿಳಿಸಿದರು.
ಲೊಯೋಲಾ ವಿಕಾಸ ಕೇಂದ್ರ, ದ ನಿರ್ದೇಶಕಿ ಪಾದರ ಜರಾ ಮಾತನಾಡಿ,ಯೂನಿಯನ್ ಎಂದರೆ ಒಂದು ಭಲವಾದ ಸಂಘಟನೆ.ಇಲ್ಲಿ ಶಿಸ್ತು, ಸಮಯ ಪಾಲನೆ, ಸಹಾಯ ಮಾಡುವ ಮನೋಭಾವ ನಿಸ್ವಾರ್ಥತೆಯಿಂದ ಕೂಡಿದರೆ ಮಾತ್ರ ಯೂನಿಯನ್
ಪ್ರಬಲವಾಗಿ ಬೆಳೆಯಲು ಸಹಾಯ ವಾಗುತ್ತದೆ. ಪ್ರತಿ ವರ್ಷ ಯೂನಿಯನ್ ಸದಸ್ಯತ್ವ ಹಣ ಕಟ್ಟಿ
ಸಮಯಕ್ಕೆ ಅನುಸಾರವಾಗಿ ಸಭೆ ಮತ್ತು ಲೆಕ್ಕಪತ್ರ, ದಲ್ಲಿ ಪಾರದರ್ಶಕತ ಹೊಂದಿ ಸದಸ್ಯರಿಗೆ ಸರಕಾರದ
ಸೌಲಭ್ಯಗಳು ದೊರಯುವಂತೆ ಮಾಡಲು ಸಾಧ್ಯ. ಕಾರ್ಮಿಕ ಇಲಾಖೆಯ ನಿಕಟ ಸಂಪರ್ಕದೊಂದಿಗೆ
ಉತ್ತಮ ಬಾಂಧವ್ಯ ಹೊಂದಿ ಒಟ್ಟಾಗಿ ಕಾರ್ಯ ನಿರ್ವಹಿಸಿದಾಗ ಸದಸ್ಯರಿಗೆ ಫಲ ದೊರೆಯುತ್ತದೆ ಎಂದರು.
ಉಪತಹಶೀಲ್ದಾರ ಟಿ ಆರ್ ಕಾಂಬಳಿ,ಸಭೆಯ ಅಧ್ಯಕ್ಷತೆಯನ್ನು ಮಟರಾಜ ಗವಾಯಿಗಳು, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ
ಸಂಘದ ಅಧ್ಯಕ್ಷ ಹಾಲೇಶ ಗೊಲ್ಲರ ಮಾತನಾಡಿದರು.
ಇದ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಹುಣಸಿಕಟ್ಟಿ ಗ್ರಾಮದ ಕಾರ್ಮಿಕ ಮಂಜುನಾಥ ಚೌಟಿಯವರಿಗೆ ಕಟ್ಟಡ ಕಾರ್ಮಿಕರ ಕಾರ್ಯಕಾರಿ ಸಮಿತಿಯಿಂದ ಚಿಕಿತ್ಸೆಯ ನೆರವಿಗಾಗಿ
5000 ಸಹಾಯ ಧನ ನೀಡಿದರು.
ಸುರೇಶ ಗೊಲ್ಲರ ವಾರ್ಷಿಕ ಲೆಕ್ಕಪತ
ವರದಿ ಮಂಡಿಸಿದರು.ಮಹಾಭಳೆಶ್ವರ ಕಮ್ಮಾರ ಸ್ವಾಗತಿಸಿದರು. ಪರಶುರಾಮ ತಳವಾರ, ಸಂವಿಧಾನ ಪ್ರಸ್ತಾವನೆ ಓದಿದರು.ಪರಮೇಶ ಚೌಟ,ಸಮಸ್ಯೆಗಳ ಮನವಿ ಮಂಡನೆ ಮಾಡಿದರು. ಮಂಜುನಾಥ ತುರುಬಿಗುಡ್ಡ, ಪ್ರವಾ ಜಾಧವ,ಮಾಲತೇಶ ಅಪ್ಪಾಜ,ಕಲೀಮ್ ವಾಸನಕಟ್ಟಿ, ಪಾಲಾಕ್ಷಯ್ಯ ಹಿರೇಮಠ,ಬಸವರಾಜ ಕೊಂತ ಬಿ, ಮಂಜುನಾಥ ವಾಲ್ಮೀಕಿ,ಸಂತೋಷ ಡೊಳ್ಳಿ,ಚಂದ್ರಪ್ಪ ಹೊಸಳ್ಳಿ, ಕೃಷ್ಣಪ್ಪ ನಾಡರ, ಬಂಗಾರೇಶ, ರಾಜೇಸಾಬ್ ಶಿಂಗೋಡ, ಹಾಗೂ ರೋಶನಿ ಮತ್ತು ಲೊಯೋಲಾ ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು.