DistrictHaveriLatestNewsSportsStateUncategorized

ದೈಹಿಕ ಹಾಗೂ ಮಾನಸಿಕವಾಗಿ ಸದೃಢತೆಗೆ ಕ್ರೀಡೆ ಸಹಕಾರಿ: ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ

ಹಾವೇರಿ: ಸಮಾಜವು ಬೆಳೆದಂತೆ ಸಮಸ್ಯೆಗಳು ಕ್ಲಿಷ್ಟಕರವಾಗುತ್ತಾ ಹೋಗುತ್ತವೆ ಇಂತಹ ಕ್ಲಿಷ್ಟಕರ ಸಮಸ್ಯೆಗಳನ್ನು ಭೇದಿಸುವುದರಲ್ಲಿ ಪೊಲೀಸ್ ಇಲಾಖೆಯು ನಿಸ್ವಾರ್ಥ ಸೇವೆಯನ್ನು ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ ಹೇಳಿದರು.

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆಯಿಂದ 3 ದಿನಗಳ ಕಾಲ ಆಯೋಜಿಸಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಪುರಾತನ ಕಾಲದಿಂದಲೂ ಯಾವುದೇ ಒಂದು ಆಡಳಿತ ವ್ಯವಸ್ಥೆಯಲ್ಲಿ ಅಂದರೆ ಅದು ಚಕ್ರಾ ಧಿಪತ್ಯವಾಗಿರಬಹುದು, ರಾಜ್ಯಪ್ರಭುತ್ವವಾಗಿರಬಹುದು, ನಿರಂಕುಶಾಪ್ರಭುತ್ವವಾಗಿರಬಹುದು ಹಾಗೂ ಪ್ರಜಾಪ್ರಭುತ್ವವಾಗಿರಬಹುದು ಈ ಆಡಳಿತ ವ್ಯವಸ್ಥೆಯಲ್ಲಿ ಎರಡು ಪ್ರಮುಖ ಜವಾಬ್ದಾರಿಗಳಿವೆ ಮೊದಲನೇಯದು ರಾಜ್ಯಸ್ವೀ ಸಂಗ್ರಹಣೆ ಮತ್ತು ಒಲಾಡಳಿತ ನಿರ್ವಹಣೆ ಎರಡನೆಯದು ಪ್ರಾಂತ್ಯಗಳ ರಕ್ಷಣೆ ಮೊದಲನೇ ಕೆಲಸವನ್ನು ಕಂದಾಯ ಇಲಾಖೆ ಮಾಡಿದರೆ ಎರಡನೆಯ ಕೆಲಸವನ್ನು ಪೊಲೀಸ್ ಇಲಾಖೆಯ ಅಥವಾ ರಕ್ಷಣಾ ಇಲಾಖೆ ಮಾಡಿಕೊಂಡು ಬಂದಿದೆ ಎಂದರು.

ರಾಜ್ಯದ ಪೊಲೀಸರು ಶಿಸ್ತಿಗೆ ಹೆಸರಾಗಿದ್ದಾರೆ. ಪೊಲೀಸ್ ಇಲಾಖೆಯ ಕರ್ತವ್ಯ ನಿಷ್ಠೆಯಿಂದ ಇಂದು ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ಪ್ರತಿಯೊಬ್ಬ ನಾಗರೀಕನು ತನ್ನ ಬದುಕನ್ನು ಸಾಗಿಸುವಂತಾಗಿದೆ. ಒತ್ತಡದ ಬದುಕು, ವೇಗವಾಗಿ ಓಡುತ್ತಿರುವ ಜನಜೀವನದ ನಡುವೆ ಎಲ್ಲರೂ ಆರೋಗ್ಯದ ಕಡೆ ಗಮನ ಹರಿಸುವುದು ಮುಖ್ಯವಾಗಿದೆ ಅದರಲ್ಲೂ ವಿಶೇಷವಾಗಿ ಪೊಲೀಸರು ಈ ನಿಟ್ಟಿನಲ್ಲಿ ಹೆಚ್ಚು ಗಮನಹರಿಸಬೇಕು ಪೊಲೀಸರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು ಅದಕ್ಕಾಗಿ ನಿತ್ಯ ವ್ಯಾಯಾಮ, ಯೋಗಾಸನ ಅವಶ್ಯಕ, ಆರೋಗ್ಯಕ್ಕಾಗಿ ಒಂದು ಗಂಟೆ ಮೀಸಲಾಗಿಡಬೇಕು ಇದರಿಂದ ಏಕಾಗ್ರತೆ ವೃದ್ಧಿಯಾಗಲಿದೆ ಎಂದು ಸಲಹೆ ನೀಡಿದರು.

ಪೊಲೀಸರು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿದ್ದರೆ ಮಾತ್ರ ಜನರ ನಿರೀಕ್ಷೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಲಿವೆ. ಕ್ರೀಡೆಗಳಲ್ಲಿ ಭಾಗವಹಿಸುವಿಕೆ ನಿರಂತರವಾಗಿರಬೇಕು ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು ಕ್ರೀಡೆಗಳಲ್ಲಿ ಹೆಚ್ಚೇಚ್ಚು ತೊಡಗಿಸಿಕೊಳ್ಳುವುದರಿಂದ ದೈಹಿಕವಾಗಿ ಸಮತೋಲನ ಕಾಯ್ದುಕೊಳ್ಳುವುದರ ಜೊತೆಗೆ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಂಶು ಕುಮಾರ ಸ್ವಾಗತಿಸಿದರು.ಬಳಿಕ ಪರೇಡ್ ಕಮಾಂಡರ್ ಆರ್ ಪಿ ಐ ಶಂಕರ ಗೌಡ ಪಾಟೀಲ್ ಇವರ ನೇತೃತ್ವದಲ್ಲಿ 5 ಪ್ಲಟುನಗಳಾದ ಹಾವೇರಿ ಉಪ ವಿಭಾಗ, ಶಿಗ್ಗಾಂವ ಉಪ ವಿಭಾಗ, ಮಹಿಳಾ ಪೊಲೀಸ್, ರಾಣೇಬೆನ್ನೂರ್ ಉಪ ವಿಭಾಗ, ಸಶಸ್ತ್ರ ಮೀಸಲು ಪಡೆ ಹಾವೇರಿ ಇವರಿಂದ ಪಥಸಂಚಲನ ನಡೆಯಿತು ಮತ್ತು ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಇದೆ ಸಂದರ್ಭದಲ್ಲಿ ಪೊಲೀಸ್ ಪೇದೆ ಸಂತೋಷ್ ನಾಯ್ಕ್ ಕ್ರೀಡಾ ಜ್ಯೋತಿ ಹಿಡಿದು ಸಾಗಿದರು.ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಲಕ್ಷ್ಮಣ ಶಿರಕೋಳ, ಜಿಲ್ಲೆಯ ಎಲ್ಲ ಪೊಲೀಸ್ ಡಿ ಎಸ್ ಪಿ, ಸಿ ಪಿ ಐ, ಪಿ ಎಸ್ ಐ, ಪೊಲೀಸ್ ಸಿಬ್ಬಂದಿಗಳು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial