DistrictHaveriLatestUncategorized

ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ: ಅಕ್ಟೋಬರ್ ಅಂತ್ಯೆದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಹಾವೇರಿ: ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ದಿಢೀರ್ ಭೇಟಿ ಅಲ್ಲಿಯ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರು.

ಮಂಗಳವಾರ 12 ಗಂಟೆಯಿಂದ ಮಧ್ಯಾಹ್ನ 2.30 ರ ತನಕ ಜಿಲ್ಲಾ ಆಸ್ಪತ್ರೆಯಲ್ಲಿ ರೌಂಡ್ ಹಾಕಿದ ಜಿಲ್ಲಾಧಿಕಾರಿಗಳು ಖುದ್ದು ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯ ಕುರಿತು ಪರಿಶೀಲನೆ ‌ಮಾಡಿದರು.

ಮೊದಲ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಂಡು, ಸಾರ್ವಜನಿಕ ವಾಹನಗಳನ್ನು ‌ಹಾಗೂ ದ್ವಿಚಕ್ರ ವಾಹನಗಳನ್ನು ಆಸ್ಪತ್ರೆಯ ಹೊರಗಡೆ ನಿಲ್ಲಿಸುವಂತೆ ತಿಳಿಸಿದರು. ಈ ವಿಚಾರದಲ್ಲಿ ಮುಂಭಾಗದ ಗೆಟ್ ಮುಂದೆ ಹೋಂ ಗಾರ್ಡ್‌ಗಳು ಸರಿಯಾಗಿ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದರು.ಬಳಿಕ ಓಪಿಡಿ ವಿಭಾಗಕ್ಕೆ ಬಂದ ಜಿಲ್ಲಾಧಿಕಾರಿಗಳು ಅಲ್ಲಿನ‌ ಜನ‌ ದಟ್ಟಣೆ ನೋಡಿ,ಓಪಿಡಿ ವಿಭಾಗದಲ್ಲಿ ಇನ್ನೇರಡು ಕೌಂಟರ್ ‌ತೆರೆಯಿರಿ. ಜೊತೆಗೆ ಪಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿ. ಇದರಿಂದ ಜನದಟ್ಟಣೆ ಹಾಗೂ ಸಮಯ ಎರಡು ಉಳಿಯುತ್ತೆ. ಈ ವ್ಯವಸ್ಥೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ವೈದ್ಯಕೀಯ ಕಾಲೇಜಿನ‌ ಡಿನ್ ಹಾಗೂ ಆಸ್ಪತ್ರೆಯ ಡಿಎಸ್ ಅವರಿಗೆ ಸೂಚನೆ ನೀಡಿದರು.

ಎಂಸಿಎಚ್ ಆಸ್ಪತ್ರೆಗೆ ತೆರಳಿ ಅಲ್ಲಿಯೂ ಹೆಚ್ಚುವರಿ ಕೌಂಟರ್ ‌ಮಾಡಲು ಸೂಚನೆ ನೀಡಿದರು.ಬಳಿಕ‌ ಆಸ್ಪತ್ರೆಯ ಮೇಲ್ಬಾಗದಲ್ಲಿ ನಡೆಯುತ್ತಿರುವು ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರು ಎರಡು ದಿನಗಳಲ್ಲಿ ಅದನ್ನು ‌ಬಳಸಿಕೊಳ್ಳಿ ಎಂದು ತಾಕೀತು ಮಾಡಿದರು. ಬಳಿಕ‌ ಮುಖ್ಯ ಕಟ್ಟಡದ ಮೇಲ್ಬಾಗದಲ್ಲಿ ನಡೆಯುತ್ತಿರುವ ಆಡಳಿತ ಕಚೇರಿಯ ಕಾಮಗಾರಿ ಮಂತಗತಿಯಲ್ಲಿ ಸಾಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಗುತ್ತಿಗೆದಾರರಿಗೆ ಯಾವಾಗ ಕಟ್ಟಡ ಬಳಕೆ ನೀಡುತ್ತಿರೀ. ಸರಿಯಾದ ಸಮಯ ತಿಳಿಸಿ ಎಂದು ತರಾಟೆ ತೆಗೆದುಕೊಂಡರು.ಆ ಮಧ್ಯ ಪ್ರವೇಶ ಮಾಡಿದ ಗುತ್ತಿಗೆದಾರರು ಕಚೇರಿಯ ಕಾಮಗಾರಿ ಪೂರ್ಣಗೊಳ್ಳಲು ಇನ್ನು 10 ರಿಂದ 15 ದಿನಗಳ ಕಾಲಾವಧಿ ಬೇಕಾಗುತ್ತದೆ. ಆಗ ಜಿಲ್ಲಾಧಿಕಾರಿಗಳು ಅಷ್ಟರೋಳಗೆ ನೀಡುವೆ ಎಂದರು.

ಬಾಕ್ಸ್:

ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಜನರು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ರಕ್ತ ‌ಪರೀಕ್ಷೆ ರಿರ್ಪೋಟ್ ನೀಡಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಇದರ ಜೊತೆಗೆ ಅಲ್ಟ್ರಾ ಸ್ಕ್ಯಾನ್ ಪರೀಕ್ಷೆಯನ್ನು ಎರಡು ತಿಂಗಳ ನಂತರ ಪರೀಕ್ಷೆ ಡೆಟ್ ನೀಡುವ ಮಾಹಿತಿ ಇದೆ. ಇದನ್ನು ಹೆಚ್ಚಿಸುವ ಕೆಲಸ ಆಗಬೇಕು ಎಂದು ವೈದ್ಯಕೀಯ ಕಾಲೇಜಿನ ಡಿನ್ ಹಾಗೂ ಆಸ್ಪತ್ರೆಯ ಡಿಎಸ್ ಅವರಿಗೆ ಸಲಹೆ ನೀಡಿದರು.

ಕೋಟ್:
ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಗೆ ಭೇಟಿ ಕಾಮಗಾರಿ ಪೂರ್ಣಗೊಳ್ಳಲು ಸಮಯ ನಿಗದಿ ಮಾಡಿದ್ದರು. ಆ ಕಾಮಗಾರಿಯ ಪ್ರಗತಿಯ ಪರಿಶೀಲನೆ ಮಾಡಲು ಇಂದು ಭೇಟಿ ನೀಡಿದ್ದೇ. ಅಡ್ಮಿನ್ ಬ್ಲಾಕ್ 15 ದಿನದಲ್ಲಿ ಕೊಡತೇವಿ ಎಂದಿದ್ದಾರೆ.ವಾರ್ಡ್ ಕಾಮಗಾರಿ ನಡೆಯುತ್ತಿದೆ. ಒಟ್ಟಾರೆಯಾಗಿ ಆಸ್ಪತ್ರೆಯ ಮೇಲ್ಬಾಗದಲ್ಲಿ ನಡೆಯುತ್ತಿರುವು ಕಾಮಗಾರಿಯನ್ನು ಈ ವರ್ಷದ ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಇದರಿಂದ ಹೆಚ್ಚಿನ ಜನ ಒಳರೋಗಿಗಳಾಗಿ ಸೇರ್ಪಡೆಯಾಗಲು ಅನುಕೂಲ ಆಗಲಿದೆ.‌ಇದರಿಂದ ಸಾರ್ವಜನಿಕರಿಗೆ ಸಹಕಾರವಾಗಲಿದೆ.

ವಿಜಯಮಹಾಂತೇಶ ದಾನಮ್ಮನವರ- ಜಿಲ್ಲಾಧಿಕಾರಿಗಳು ಹಾವೇರಿ.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial