ರೈಟ್ ಗೈಡನ್ಸ್ ಪ್ರಾಥಮಿಕ ಪಿಯು ಕಾಲೇಜಿನಲ್ಲಿ 78.ನೇ ಸ್ವಾತಂತ್ರ್ಯೋತ್ಸವ
ಹಾನಗಲ್: ಇಲ್ಲಿನ ಆನೆಕೆರೆ ಹತ್ತಿರ ಇರುವ ರೈಟ್ ಗೈಡೆನ್ಸ್ ಪ್ರಾಥಮಿಕ ಮತ್ತು ಪಿಯು ಸೈನ್ಸ್ ಕಾಲೇಜಿನಲ್ಲಿ ನಡೆದ 78 ನೇ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಕೆ ಅಬ್ದುಲ್ ಕರೀಂ ಅವರು ನೆರವೇರಿಸದರು.
ಸ್ವಾತಂತ್ರ್ಯ ಹೋರಾಟಗಾರರ ತತ್ವಾದರ್ಶಗಳನ್ನು ನಾವೇಲ್ಲರೂ ಜೀವನಲ್ಲಿ ಅಳವಡಿಸಿಕೊಳ್ಳಬೇಕು. ಸ್ವಾತಂತ್ರದ ಮಹತ್ವವನ್ನು ತಿಳಿಸಿ ಶುಭಕೋರಿದರು.
ಮುಖ್ಯ ಅಥಿತಿಯಾಗಿ ಡಾ. ನೂರುದ್ದೀನ್ ಬೆನ್ನೂರು ಸರ್ಜನ್, ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಸವಣೂರು,ಡಾ ಶಿವಕುಮಾರ್ ಸರ್ಜನ್, ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಹಾನಗಲ್, ಶಿರಸಿಯ ಯೂನಿಯನ್ ಪಬ್ಲಿಕ್ ಶಾಲೆಯ ಶೇಖ್ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಮಂಗಳೂರು ಭಾಗವಹಿಸಿದ್ದರು.
ನಂತರ ವಿದ್ಯಾರ್ಥಿಗಳಿಂದ ಸ್ವಾತಂತ್ರ ದಿನಾಚರಣೆಯ ಕುರಿತು ಭಾಷಣ, ದೇಶಭಕ್ತಿಗೀತೆ ಹಾಗೂ ನೃತ್ಯಗಳನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಗಂಗಾಧರ ಬಿ ಮೇಸ್ತ್ರಿ ಅವರು, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಿರುವ ಶಿಸ್ತನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ನಶಾ ಮುಕ್ತ ಭಾರತ ಅಭಿಯಾನ ಕುರಿತು ಪ್ರತಿಜ್ಞಾವಿಧಿಯನ್ನು ಭೋದಿಸಿದರು. ರಿಫತ ತನಜ್ಜುಮ್ ಶೇಖ್ ನಿರೂಪಿಸಿದರು. ಲೈಕಾ ಸಿಡೆನೂರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಲೆ ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರಾದ ರಫೀಕ್ ಹೊಸೂರು, ರಾಜೇಶ್ವರಿ ಪಾಟೀಲ್, ಭಾಗ್ಯ ತುಪ್ಪದ್, ಕುಮಾರಿ. ಪವಿತ್ರಾ ಪೈ ಮತ್ತು ಕುಮಾರಿ. ಶೃತಿ ಕೋಟಿ, ಕುಮಾರಿ ಫಾತಿಮಾ ಹಾನಗಲ್, ನಸರೀನಬಾನು, ನಾಜಿಮಾ, ಶಾಹೀನತಾಜ, ಹಾಗು ಎಲ್ಲಾ ಸಿಬ್ಬಂದಿ ಸದಸ್ಯರು ಹಾಜರಿದ್ದರು.