CrimeDistrictHaveriLatestUncategorized
ಮಾದಾಪುರ ಮೇಲ್ಚಾವಣಿ ದುರಂತ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ
ಹಾವೇರಿ: ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಕಳೆದವಾರ ಮನೆ ಮೇಲ್ಚಾವಣಿ ಕುಸಿದ ಘಟನೆಯಲ್ಲಿ ಓಟ್ಟು ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಮದಾಪುರ ಮನೆ ಮೇಲ್ಚಾವಣೆ ಕುಸಿತ ಘಟನೆಯಲ್ಲಿ ಮತ್ತೊರ್ವ ಹಿರಿಯ ಸದಸ್ಯೆ ಸಾವುಗೊಂಡಿದ್ದಾರೆ. ಮನೆಯ ಕುಸಿದ ದಿನ ಮೂವರು ಮೃತಪಟ್ಟಿದ್ದರು. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯವಾಗಿತ್ತು. ಅದರಲ್ಲಿ ಯಲ್ಲಮ್ಮ ಹರಕುಣಿ(68) ಗಂಭೀರ ಗಾಯದಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.