CrimeDistrictHaveriLatestUncategorized
ಟೀ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟ: ವ್ಯಕ್ತಿಗೆ ಗಾಯ
ಹಾನಗಲ್ : ಟೀ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟ್‌ಗೊಂಡ ಪರಿಣಾಮ ವ್ಯಕ್ತಿ ಗಾಯಗೊಂಡಿರುವ ಘಟನೆ ಆಡೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಹಾನಗಲ್ ತಾಲೂಕಿನ ಕಂಚಿನೆಗಳೂರು ಪ್ಲಾಟ್‌ನ ಬಸ್ ನಿಲ್ದಾಣದ ಬಳಿ ಇದ್ದ ಟೀ ಅಂಗಡಿಯಲ್ಲಿ ಎಂದಿನಂತೆ ಟೀ ಮಾಡುವಾಗ ಏಕಾಏಕಿ ಸಿಲಿಂಡರ್ ಸ್ಪೋಟ್‌ಗೊಂಡಿದೆ.ಈ ವೇಳೆ ಅಂಗಡಿಯಲ್ಲಿದ್ದ ಹನುಮಂತಪ್ಪ ಕರಡಿ ಎಂಬುವ ವ್ಯಕ್ತಿಗೆ ಗಾಯವಾಗಿದೆ.ಗಾಯಗೊಂಡ ವ್ಯಕ್ತಿಯನ್ನು ಮೊದಲು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಕಳಿಸಲಾಗಿದೆ.