ಹಾವೇರಿ: ಜನೆವರಿಯಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ 10 ಆರೋಪಿಗಳಿಗೆ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ನೀಡಿದೆ.
ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ 7 ಪ್ರಮುಖ ಆರೋಪಿಗಳು ಸೇರಿದಂತೆ ಒಟ್ಟು 19 ಆರೋಪಿಗಳನ್ನು ಹಾನಗಲ್ ಪೊಲೀಸರು ಬಂಧಿಸಿದ್ದರು. ಈ ಪೈಕಿ ಜುಲೈ 31ರಂದು ಹೈಕೋರ್ಟ್ ನೀಡಿದ ತೀರ್ಪಿನ ಮೇರೆಗೆ ಹಾವೇರಿ ಸಬ್ ಜೈಲ್‌ನಿಂದ 10 ಜನ ಆರೋಪಿಗಳನ್ನು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಜಾಮೀನು ಮಂಜೂರು ಮಾಡಿದ ಆರೋಪಿಗಳಲ್ಲಿ ಇಮ್ರಾನ್ ಜೇಕಿನಕಟ್ಟಿ (ಅ-5), ರೆಹಾನ್ ವಾಲೀಕಾರ (ಎ-6), ಮುಫೀದ್ ಓಣಿಕೇರಿ (ಎ-9), ಇಬ್ರಾಹಿಂ ಬಂಕಾಪುರ (ಅ-10), ಇಸ್ಮಾಯಿಲ್ ಹುಬ್ಬಳ್ಳಿ (ಅ-12), ನಿಯಾಜ್ ದರ್ಗಾ (ಎ- 14), ಮತ್ತು ಮೊಹಮ್ಮದ ಸಾದಿಕ್ ಕುಸನೂರ್ (ಅ-16). ಈ ಹಿಂದೆ ಇಸ್ಮಾಯಿಲ್ ಓಣಿಕೇರಿ (ಏ-17), ಆಸಿಫ್ಖಾನ್ ಪಯ್ಮಖಾನವರ್ (ಅ-18), ಮುಜಾಮಿಲ್ ಇಮ್ಮುಸಾಬನವರ್ (ಅ-19) ಅವರಿಗೆ ಜು.31 ರಂದು ಹೈಕೋರ್ಟ್ ಜಾಮೀನು ನೀಡಿತ್ತು.
ಜಾಮೀನು ಪಡೆದ 10 ಆರೋಪಿಗಳು ಐಪಿಸಿ ಸೆಕ್ಷನ್ 143, 147, 354, 504, 506, 448 ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಮೇಲೆ ಹಲ್ಲೆ, ಅಪಹರಣ, ಅತಿಕ್ರಮ ಪ್ರವೇಶ ಮತ್ತು ಹತ್ಯೆಗೆ ಯತ್ನಿಸಿದ ಆರೋಪಗಳನ್ನು ಎದುರಿಸುತ್ತಿರುವ ಕಾರಣ ಅವರಿಗೆ ಜಾಮೀನು ನೀಡಲಾಗಿದೆ. ಜನವರಿ 8, 2024 ರಂದು ಸಂತ್ರಸ್ತೆಯ ಮೇಲೆ ಆರೋಪಿಗಳು ಅತ್ಯಾಚಾರ ಮಾಡಿಲ್ಲ, ಆದರೆ ಅವರು ಅಪರಾಧ ಮಾಡಲು ಬೆಂಬಲಿಸಿದ್ದಾರೆ ಎಂದು ಪೊಲೀಸರು ಮಾರ್ಚ್ 5, 2024 ರಂದು ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ತಿಳಿಸಿದ್ದಾರೆ. ಅಬ್ದುಲ್ಖಾದರ್ ಹಂಚಿನಮನಿ (A-4) ಎನ್ನುವ ಆರೋಪಿಯು IPC ಸೆಕ್ಷನ್ 120B ಅಡಿಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆ ನ್ಯಾಯಾಲಯವು ಅವರಿಗೆ ಜಾಮೀನನ್ನು ತಿರಸ್ಕರಿಸಿದೆ.
ಪ್ರಮುಖ ಏಳು ಆರೋಪಿಗಳಿಗೆ ಜೈಲೂಟ ಫಿಕ್ಸ್:
ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿಗಳಲ್ಲಿ ಅಫ್ತಾಬ್ ಚಂದನಕಟ್ಟೆ (ಎ-1), ಮದರಸಾಬ್ ಮಂಡಕ್ಕಿ (ಎ-2), ಸಮೀವುಲ್ಲಾ ಲಾಲನವರ್ (ಎ-3), ಮೊಹಮ್ಮದ್ ಸಾದಿಕ್ ಅಗಸಿಮನಿ (ಎ-7), ಸೋಹಿಬ್ ಮುಲ್ಲಾ (ಎ-8), ತೌಸಿಫ್ ಚೋಟಿ (ಎ-8), ಎ-11), ರಿಯಾಜ್ ಸವಿಕರ್ (ಅ-13) ಜಾಮೀನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಈ ಆರೋಪಿಗಳು ಮಹಿಳೆಯರ ಮೇಲೆ 376ಡಿ ಸಾಮೂಹಿಕ ಅತ್ಯಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಕೋಟ್ : 19 ಜನರ ಮೇಲೆ ಪ್ರಕರಣ ದಾಖಲಾಗಿತ್ತು.ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಗಳು ತಿರಸ್ಕರಗೊಂಡಿದ್ದು, ಹೈಕೋರ್ಟ್‌ನಲ್ಲಿ ಚಾಲೆಂಜ್ ಮಾಡಿದಾಗ ನಾನು 7 ಜನರಿಗೆ ನಮ್ಮ ಕೋಲಿಗ್ ನಾಲ್ಕು ಜನ ಆರೋಪಿದರಿಗೆ ಜಾಮೀನು ಮಂಜೂರು ಮಾಡಿಸಿದ್ದೇವೆ.ಜಾಮೀನು ಮಂಜೂರು ಮಾಡುವಾಗ ಘನ ನ್ಯಾಯಾಲಯವು ಆರೋಪಿತರಿಗೆ ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಬಾರದು, ದೂರುದಾರರಿಗೆ ಬೇದರಿಕೆ ಹಾಕಬಾರದು, ಇಂತಹ ಘಟನೆಗಳಲ್ಲಿ ಮರುಕಳಿಸಬಾರದು.ಇಬ್ಬರು ಜಾಮೀನುದಾರರಿಂದ 2-2 ಲಕ್ಷ ರೂ ಬಾಂಡ್ ಪಡೆದು ಜಾಮೀಮ ಮಂಜೂರು ಮಾಡಲಾಗಿದೆ.
ಉಮೇಶ ಎನ್ ಗೌಳಿ – ನ್ಯಾಯವಾದಿ