Uncategorized
ಕೆರೆಗೆ ಭಾಗೀನ ಅರ್ಪಣೆ ಮಾಡಿದ ಮಾಜಿ ಸಚಿವ ಬಿ.ಸಿ.ಪಾಟೀಲ
ಹಾವೇರಿ: ತಾಲೂಕಿನ ಜೋಕನಾಳ ಗ್ರಾಮದ ಭಗವತಿ ಕೆರೆಗೆ ಮಾಜಿ ಸಚಿವ ಬಿ.ಸಿ.ಪಾಟೀಲ ಬಾಗಿನ ಅರ್ಪಿಸಿದರು.
ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಗೆ ಕ್ಷೇತ್ರದ ಅನೇಕ ಕೆರೆಗಳು ತುಂಬಿ ಕೋಡಿ ಬಿಳುವ ಹಂತಕ್ಕೆ ತಲುಪಿವೆ. ಇದೇ ವೇಳೆ ಐತಿಹಾಸಿಕ ಪ್ರಸಿದ್ಧ ಜೋಕನಾಳ ಹತ್ತಿರವಿರುವ ಭಗವತಿ ಕೆರೆಯ ಭರ್ತಿಯಾಗಿದ್ದು ಇಂದು ಆ ಕೆರೆಗೆ ಬಾಗಿನ ಅರ್ಪಿಸಿದರು. ಈ ಸಮಯದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ದೇವರಾಜ್ ನಾಗಣ್ಣನವರ್, ಸುಶೀಲ್ ನಾಡಿಗೇರ, ರವಿಶಂಕರ್ ಬಳಿಕಾಯಿ, ಆನಂದಪ್ಪ ಹಾದಿಮನಿ, ಮಾಲತೇಶ್ ಗಂಗೋಳ್, ರಾಜು ಬಟ್ಲಕಟ್ಟಿ, ರೇಣುಕಪ್ಪ ಭರಮಗೌಡ್ರ, ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು.