ಮೈದುಂಬಿ ಹರಿಯುತ್ತಿದೆ ಧರ್ಮಾ ಕಾಲುವೆ: ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ ಕಂಚಿನೆಗಳೂರು
ಧರ್ಮಾ ಕಾಲುವೆಗೆ ಅಡ್ಡಲಾಗಿ ಕಟ್ಟಿರುವ ವಡ್ಡಿಗೆ ಅಪಾರ ಪ್ರಮಾಣದ ನೀರು ಹರಿದು ಬಂದ ಪರಿಣಾಮ ಕೃತಕವಾಗಿ ಜಲಪಾತ ನಿರ್ಮಾಣವಾಗಿದೆ.
ಹಾನಗಲ್: ಜಿಲ್ಲೆಯಾದ್ಯಂತ ಸುರಿಯುತ್ತಿರುವ ನಿರಂತರ ಮಳೆಗೆ ಹಾವೇರಿ ಜಿಲ್ಲೆಯ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಹಾನಗಲ್ಲ ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿನ ಧರ್ಮಾ ನದಿ ಕಾಲುವೆ ಅಡ್ಡಲಾಗಿ ನಿರ್ಮಿಸಿರುವ ಕಾಲುವೆಯಲ್ಲಿ ಚಿಕ್ಕದಾದ ಜಲಪಾತ ನಿರ್ಮಣ ಆಗಿದೆ.
ದಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಧರ್ಮಾ ನದಿಯ ಕಾಲುವೆ ಮೈದುಂಬಿ ಹರಿಯುತ್ತಿದೆ.ಈ ರೀತಿ ರೌದ್ರ ರಮಣೀಯವಾಗಿ ಹರಿಯುತ್ತಿರುವ ಕಾಲುವೆಯನ್ನು ನೋಡಲು ನಿತ್ಯ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಜಲಧಾರೆಯ ವೈಭೋಗವನ್ನು ಕಣ್ಣು ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ.ನೀವು ದೃಶದಲ್ಲಿ ನೋಡತಾ ಇರಬಹುದು ಬಂದತ ಜನರು ನೀರಿಗೆ ಇಳಿದು ಸೆಲ್ಫೀ ತಗೆದುಕೊಳ್ಳುವ ಮೂಲಕ ಧರ್ಮಾ ನದಿಯ ಕಾಲುವೆಯ ಸೌಂದರ್ಯವನ್ನು ಆನಂದಿಸುತ್ತಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಈ ಕಾಲುವೆ ಒಡ್ಡು ಒಡೆದು ಹಾಳಾಗಿತ್ತು, ಇಲ್ಲಿನ ಗ್ರಾಮಸ್ಥರ ಒತ್ತಾಯದ ಮೇರೆಗೆ ಈಗ ಕಾಲುವೆಗೆ ತಡೆಗೋಡೆ ನೀರ್ಮಾಣ ಮಾಡಲಾಗಿದೆ.ನಿರ್ಮಿಸಿರುವ ತಡೆಗೋಡೆ ಈಗ ಅಪಾರ ಪ್ರಮಾಣದಲ್ಲಿ ಮಳೆಯಿಂದ ನೀರು ಹರಿದು ಬಂದ ಪರಿಣಾಮ ಫಾಲ್ಸ್ ಆಗಿ ಬದಲಾಗಿದೆ.ಇನ್ನೂ ತಡೆಗೋಡೆಯ ಮೇಲೆ ಚಿತ್ರಿಸಲಾಗಿರು ಈಶ್ವರನ ಚಿತ್ರಗಳು ನೋಡುಗರ ಕಣ್ಮನ ಸೇಳೆಯುತ್ತಿವೆ. ಜನ ಕೃತವಾಗಿ ಸೃಷ್ಟಿಯಾಗಿರುವ ಈ ಸುಂದರ ಜಲದಾರೆಯನ್ನು ನೋಡಿ ಸಂಭ್ರಮಿಸಲು ಕುಟುಂಬ ಸಮೇತವಾಗಿ ಆಗಮಿಸುತ್ತಿದ್ದಾರೆ.
ಕೋಟ್: ಇದು ನಮ್ಮೂರು, ಈಗ ಹೆಚ್ಚಿನ ನೀರು ಹರಿದು ಬಂದ ಪರಿಣಾಮ ಜಲಪಾತವಾಗಿ ಮಾರ್ಪಟ್ಟಿದೆ.ನೋಡಲು ಬಾಳ ಚಂದ ಕಾಣಿಸುತ್ತಿದೆ. ನೀರು ಬಂದಾಗ ಮೊಬೈಲ್ ನಲ್ಲಿ ವಿಡಿಯೋ ವೈರಲ್ ಆಗಿತ್ತು. ಅದನ್ನು ನೋಡಿದ ಮೇಲೆ ಮಕ್ಕಳೊಂದಿಗೆ ಬಂದು ಫಾಲ್ಸ್ ನೋಡತಾ ಇದೆ.ಇಷ್ಟೊಂದು ಸುಂದರ ಜಲಪಾತ ನಮ್ಮೂರಿನಲ್ಲಿರುವುದು ನಮಗೆ ಹೆಮ್ಮೆಯ ವಿಚಾರ. –ಮಾಲಿನಿ.