INTERNATIONALTechWorld
ನಿಯಂತ್ರಣ ಕಳೆದುಕೊಂಡು ವಿಫಲವಾದ ಸ್ಪೇಸ್ ಎಕ್ಸ್ ನೌಕೆ
ಟೆಕ್ಸಾಸ್: ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಏಳು ತಿಂಗಳ ಬಳಿಕ ಮತ್ತೂಮ್ಮೆ ಗಗನ ನೌಕೆ ಹಾರಿಸುವ ಪ್ರಯತ್ನ ಮಾಡಿ ವಿಫಲಗೊಂಡಿದೆ. ದಕ್ಷಿಣ ಟೆಕ್ಸಾಸ್ ನಲ್ಲಿ ಇರುವ ಉಡಾವಣ ಕೇಂದ್ರದಿಂದ ನಭಕ್ಕೆ ನೆಗೆದ ಎಂಟು ನಿಮಿಷಗಳಲ್ಲಿ ಅದು ನಿಯಂತ್ರಣ ಕಳೆದುಕೊಂಡಿತು. ಹೀಗಾಗಿ ಉಡಾವಣ ಕೇಂದ್ರದ ವತಿಯಿಂದ ಯೋಜನೆ ವಿಫಲವಾಗಿದೆ ಎಂದು ಪ್ರಕಟಿಸಲಾಯಿತು. ಗನನನೌಕೆ ಉಡಾವಣೆ ಯಾಗುತ್ತಿರುವಂತೆಯೇ ಎಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಿತು. ಒಟ್ಟು 400 ಅಡಿ ಎತ್ತರದ ರಾಕೆಟ್ ಅನ್ನು ಈ ವರ್ಷದ ಎಪ್ರಿಲ್‌ನಲ್ಲಿ ಮೊದಲ ಬಾರಿಗೆ ಉಡಾಯಿಸಲಾಗಿತ್ತು. ಆ ಸಂದರ್ಭದಲ್ಲಿ ಅದು ಭಾರೀ ಪ್ರಮಾಣದಲ್ಲಿ ಸ್ಫೋಟಗೊಂಡಿತ್ತು.