
ಉದಯಪುರ: ನನ್ನ ಹೆಸರಿನಲ್ಲಿ ಮನೆ ಇಲ್ಲ, ಆದರೆ ನಾನು ದೇಶದ ಅನೇಕ ಹೆಣ್ಣುಮಕ್ಕಳ ಹೆಸರಿನಲ್ಲಿ ಮನೆಗಳನ್ನ ನೀಡಲು ಕೆಲಸ ಮಾಡಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ನಮ್ಮ ಸರ್ಕಾರ ತಂದಿದೆ. ಬಡವರಿಗೆ ಮನೆ, ನೀರು, ರಸ್ತೆ, ವಿದ್ಯುತ್ ಮತ್ತು ಶಿಕ್ಷಣ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಇಂದು, ದೇಶಾದ್ಯಂತ ಬಡವರಿಗಾಗಿ ನಾಲ್ಕು ಕೋಟಿಗೂ ಹೆಚ್ಚು ಪಕ್ಕಾ ಮನೆಗಳನ್ನ ನಿರ್ಮಿಸಲಾಗಿದೆ. ಬುಡಕಟ್ಟು ಜನಾಂಗದವರಿಗೆ ಅವರ ಇಚ್ಛೆಯಂತೆ ಮನೆಗಳನ್ನ ನಿರ್ಮಿಸಲಾಗಿದೆ” ಎಂದರು.
ಇದಾದ ಬಳಿಕ ವಡೋದರಾ ತಲುಪಿದ ಪ್ರಧಾನಿ ಮೋದಿ ಅವರಿಗೆ ಇಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು. ಇಲ್ಲಿ ನಾರಿ ಶಕ್ತಿ ವಂದನೆಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಮಹಿಳಾ ಮೀಸಲಾತಿ ಮಸೂದೆಯನ್ನ ಮೂರು ದಶಕಗಳಿಂದ ನಿಲ್ಲಿಸಿದ್ದಾರೆ. ಈಗ ಮೀಸಲಾತಿ ಮಸೂದೆ ಅಂಗೀಕಾರವಾದ ಬಳಿಕ ಪ್ರತಿಪಕ್ಷಗಳು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನ ಒಡೆಯಲು ಪ್ರಯತ್ನಿಸುತ್ತಿವೆ ಎಂದು ಕಿಡಿಕಾರಿದರು.