ರಾಜಕೀಯವಿಜಯೇಂದ್ರ ಕೇವಲ BSY ಬಣಕ್ಕೆ ಮಾತ್ರ ಅಧ್ಯಕ್ಷರೇ?: ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು: ಯಡಿಯೂರಪ್ಪನವರ ಮಗ ಅಧ್ಯಕ್ಷನಾಗಿರುವುದು ಸಂತೋಷ ಕೂಟಕ್ಕೆ ತೀವ್ರ ಅಸಹನೆ ಇರುವುದು ಜಗತ್ತಿಗೆ ತಿಳಿದಿರುವ ಸತ್ಯ. ಅದೇ ಸಂತೋಷ ಕೂಟದ ಭಾಗವಾಗಿರುವ ಬಿಜೆಪಿ ಕರ್ನಾಟಕ ಸಾಮಾಜಿಕ ಜಾಲತಾಣಕ್ಕೂ ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ವಿಜಯೇಂದ್ರ ಅಧ್ಯಕ್ಷರಾಗಿ ನೇಮಕವಾಗಿ ಮೂರ್ನಾಲ್ಕು ದಿನ ಕಳೆದಾಗಿದೆ, ಪದಗ್ರಹಣವೂ ಆಗಿದೆ, ಆದರೆ ಇನ್ನೂ ಸಹ ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ನಳಿನ್ ಕುಮಾರ್ ಕಟೀಲ್ ಕಂಗೊಳಿಸುತ್ತಿದ್ದಾರೆ! ಬಿಜೆಪಿ ಪಕ್ಷ ವಿಜಯೇಂದ್ರರನ್ನು ಒಪ್ಪಿಕೊಂಡಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ವಿಜಯೇಂದ್ರ ಕೇವಲ BSY ಬಣಕ್ಕೆ ಮಾತ್ರ ಅಧ್ಯಕ್ಷರೇ? ಎಂದು ಪ್ರಶ್ನಿಸಿದೆ.
ಬಿಎಲ್ ಸಂತೋಷ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಗಾಢ ಮೌನ, ಇಷ್ಟು ದಿನ #FamilyJanataParty ಒಡೆದ ಮನೆಯಾಗಿತ್ತು, ಇನ್ಮುಂದೆ ಯುದ್ಧಕಣವಾಗುವುದು ನಿಶ್ಚಿತ, ಸಂತೋಷ ಕೂಟ ರಣವಿಳ್ಯ ನೀಡಲು ತಯಾರಾಗುತ್ತಿದೆ! #BJPvsBJP ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಯಡಿಯೂರಪ್ಪನವರ ಪುತ್ರನ ಅಧ್ಯಕ್ಷ ಗಾದಿಯ ಪದಗ್ರಹಣ ಕಾರ್ಯಕ್ರಮಕ್ಕೆ ಹಾಜರಿರುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ @CTRavi_BJP, ಸಿ.ಟಿ ರವಿಯ ಬಾಯಲ್ಲಿ ಬಂದಿದ್ದು ಕೇವಲ ಅವರೊಬ್ಬರ ಮಾತಲ್ಲ, ಇಡೀ ಸಂತೋಷ ಕೂಟದ ಅಸಹನೆಯ ಮಾತುಗಳು.
ಎಕ್ಸ್ ಖಾತೆಯಲ್ಲಿ ಬದಲಾಗದ ಫೋಟೋವಿಜಯೇಂದ್ರ ಅಧ್ಯಕ್ಷರಾಗಿ ನೇಮಕವಾಗಿ ಮೂರ್ನಾಲ್ಕು ದಿನ ಕಳೆದಾಗಿದೆ, ಪದಗ್ರಹಣವೂ ಆಗಿದೆ, ಆದರೆ ಇನ್ನೂ ಸಹ ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ನಳಿನ್ ಕುಮಾರ್ ಕಟೀಲ್ ಕಂಗೊಳಿಸುತ್ತಿದ್ದಾರೆ! ಬಿಜೆಪಿ ಪಕ್ಷ ವಿಜಯೇಂದ್ರರನ್ನು ಒಪ್ಪಿಕೊಂಡಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ವಿಜಯೇಂದ್ರ ಕೇವಲ ಬಣಕ್ಕೆ ಮಾತ್ರ ಅಧ್ಯಕ್ಷರೇ? ಎಂದು ಪ್ರಶ್ನಿಸಿದೆ. ಇದಾದ ಕೆಲವೇ ನಿಮಿಷಗಳಲ್ಲಿ ವಿಜಯೇಂದ್ರ ಅವರ ಫೋಟೋ ಪಕ್ಷದ ಅಧಿಕೃತ ಎಕ್ಸ್ ಖಾತೆಯಲ್ಲಿ ಕಾಣಿಸಿಕೊಂಡಿದೆ.
ಬಳಸಿ ಬಿಸಾಡುವ ಕಮಲಪಕ್ಷ
ಇನ್ನು ಬಿಜೆಪಿಯಲ್ಲಿ ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗದ ಬಗ್ಗೆ ಸಂಸದ ರಮೇಶ್ ಜಿಗಜಿಣಗಿ ಅವರು ಹೇಳಿಕೆಯ ವರದಿಯನ್ನು ಲಗತ್ತಿಸಿರುವ ಕಾಂಗ್ರೆಸ್, ಬಳಸಿ ಬಿಸಾಡುವುದು ಬಿಜೆಪಿ ಪದ್ಧತಿ ಎಂದು ಆರೋಪಿಸಿದೆ.
ಇದುವರೆಗೆ ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ಅವಕಾಶ ಕೊಟ್ಟಿಲ್ಲ ಬಿಜೆಪಿ ಪಕ್ಷ. ದಲಿತರಿಗೆ ಜಗನ್ನಾಥ ಭವನದ ಗರ್ಭಗುಡಿಗೆ ಪ್ರವೇಶ ನಿಷೇಧಿಸಲಾಗಿದೆಯೇ ಕರ್ನಾಟಕ ಬಿಜೆಪಿಯಲ್ಲಿ ದಲಿತ, ಹಿಂದುಳಿದ ವರ್ಗದ ರಾಜಕಾರಿಣಿಗಳನ್ನು ಬಳಸಿ ಬೀಸಾಡುವುದು ಪಾರಂಪರಿಕವಾಗಿ ನಡೆದುಬಂದ ಪದ್ಧತಿ ಎಂಬುದನ್ನು ಸ್ವತಃ ಬಿಜೆಪಿಯ ಸಂಸದರೇ ಹೇಳಿದ್ದಾರೆ. ಬಿಜೆಪಿ ದಲಿತ ವಿರೋಧಿ ಎಂಬುದಕ್ಕೆ ಸ್ಪಷ್ಟ ನಿದರ್ಶನವಿದು ಎಂದಿದ್ದಾರೆ.