ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು: ಇನ್ನಾದರೂ ರಾಜ್ಯ ಬಿಜೆಪಿಯಲ್ಲಿ ಹಿರಿಯರಿಗೆ ಸಿಗುತ್ತಾ ಮನ್ನಣೆ?
ಇನ್ನೇನು ಲೋಕಸಭಾ ಚುನಾವಣೆಗೆ ತಿಂಗಳುಗಳು ಬಾಕಿಯಿವೆ..ರಾಜ್ಯ ಬಿಜೆಪಿ ಲೋಕಸಭಾ ಸಮರವನ್ನು ಗೆಲ್ಲಬೇಕು ಅಂದ್ರೆ ಹಿರಿಯ ಕಮಲ ಕಲಿಗಳಿಗೆ ಮಣೆ ಹಾಕಬೇಕು ಅನ್ನೋ ಕೂಗು ಜೋರಾಗಿ ಕೇಳಿಬರ್ತಿದೆ..ವಿಧಾನಸಭಾ ಚುನಾವಣೆಯ ಟೈಮ್ನಲ್ಲಿ ಕೇಸರಿ ಪಾಳಯದಲ್ಲಿ ಆದ ಸರ್ಜರಿ, ಹೊಸಬರಿಗೆ ಮಣೆ ಹಾಕಿ, ಹಿರಿಯ ನಾಯಕರನ್ನು ಸೈಡ್ಲೈನ್ ಮಾಡಿದ್ದೇ ಬಿಜೆಪಿ ಸೋಲಿಗೆ ಕಾರಣ ಅನ್ನೋ ಮಾತುಗಳು ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಕೇಳಿಬರ್ತಿದೆ.
ಈಗಲಾದರೂ ರಾಜ್ಯ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ, ಪಕ್ಷಕ್ಕಾಗಿ ಅವಿರತವಾಗಿ ದುಡಿದ, ಪಕ್ಷಕ್ಕಾಗಿ ತಮ್ಮನ್ನೇ ತಾವು ಮುಡಿಪಾಗಿಟ್ಟ ಹಿರಿಯ ನಾಯಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಅನ್ನೋ ಒಮ್ಮತದ ಅಭಿಪ್ರಾಯ ವ್ಯಕ್ತವಾಗ್ತಿದೆ.. ವಿ.ಸೋಮಣ್ಣ, ಬಿಎಸ್ವೈ, ಈಶ್ವರಪ್ಪ ಸೇರಿದಂತೆ ಇನ್ನೂ ಅಗ್ರಪಂಕ್ತಿ ನಾಯಕರಿಗೆ ಗೌರವ ನೀಡಬೇಕು ಅನ್ನೋ ಸುದ್ದಿ ರಾಜಕೀಯ ವಲಯದಲ್ಲಿ ಓಡಾಡ್ತಿದೆ..ಇನ್ನೂ ಕೂಡ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕ ಆಗ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯಾಗಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಲಿಂಗಾಯತ ಪ್ರಬಲ ನಾಯಕ ವಿ.ಸೋಮಣ್ಣ ಅವ್ರನ್ನು ನೇಮಿಸಬೇಕು ಅಂತ ಅವ್ರ ಬೆಂಬಲಿಗರು, ಅಭಿಮಾನಿಗಳು ಮನವಿ ಮಾಡಿಕೊಳ್ತಿದ್ದಾರೆ..ಸೋಮಣ್ಣ ರಾಜ್ಯ ವಸತಿ ಸಚಿವರಾಗಿ, ತಾವೆಷ್ಟು ಸಮರ್ಥ ಸಚಿವ ಅನ್ನೋದನ್ನು ಸಾಬೀತು ಪಡಿಸಿದ್ದಾರೆ..ಹಾಗೆ ಕೊರೊನಾ ಟೈಮ್ನಲ್ಲಂತೂ ತಮ್ಮ ಕ್ಷೇತ್ರದ ಜನರಿಗೆ ಮಾತ್ರವಲ್ಲದೇ,ಹಲವು ಕ್ಷೇತ್ರಗಳ ಜನ್ರಿಗೆ ಸಹಾಯ ಮಾಡಿದ್ದಾರೆ..ಆಪದ್ಬಾಂಧವನಂತೆ ಸಹಾಯ ಹಸ್ತ ನೀಡಿದ್ದಾರೆ ಅನ್ನೋದು ಕೊರೊನಾ ಸಂತ್ರಸ್ತರ ಮಾತು..ಇನ್ನು ಕೊಡಗು ಜಿಲ್ಲಾ ಉಸ್ತುವಾರಿ ಕೊಟ್ಟಾಗ ಪ್ರವಾಹದಂತಹ ಸಂಕಷ್ಟ ಪರಿಸ್ಥಿತಿ ಬಂದಾಗ ತಾವೇ ಖುದ್ದು ನಿಂತು ರಕ್ಷಣಾ ಕಾರ್ಯಾಚರಣೆ ನೆರವೇರಿಸಿದ್ರು.
ಸಂತ್ರಸ್ಥರಿಗೆ ಬೇಕಾದ ಸೌಲಭ್ಯವನ್ನು ಒದಗಿಸಿದ್ರು.. ಇನ್ನು ಪಕ್ಷದ ವರಿಷ್ಟರ ಮಾತಿಗೆ ಓಗೊಟ್ಟು, ಅದಕ್ಕೆ ತಕರಾರನ್ನು ತೆಗೆಯದೆ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ರು..ಮತ್ತೆ ಸೋಮಣ್ಣ ಅವ್ರನ್ನು ರಾಜ್ಯ ಉಪಚುನಾವಣಾ ಚಾಣಕ್ಯ ಅಂತಾನೆ ಕರಿತಾರೆ..ಪಕ್ಷ ಯಾವುದೇ ಕ್ಷೇತ್ರದ ಉಪ ಚುನಾವಣೆ ಜವಾಬ್ದಾರಿ ನೀಡಿದ್ರೂ, ಅಲ್ಲೆಲ್ಲ ಗೆಲ್ಲಿಸಿಕೊಂಡು ಬಂದಿದ್ದಾರೆ..ಹೀಗೆ ವಿ.ಸೋಮಣ್ಣ ತಮಗೆ ಯಾವುದೇ ಹುದ್ದೆ ಕೊಟ್ರೂ, ಪಕ್ಷ ಯಾವುದೇ ಜವಾಬ್ದಾರಿಯನ್ನು ನೀಡಿದ್ರೂ ಅದನ್ನು ತುಂಬಾ ಶ್ರದ್ಧೆಯಿಂದ ಸಮರ್ಥವಾಗಿ ನಿಭಾಯಿಸಿದ್ದಾರೆ ಅಂತ ಅವ್ರನ್ನು ಹತ್ತಿರದಿಂದ ಬಲ್ಲವರು, ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.. ಹಾಗೆ ಈ ಬಾರಿ ಲೋಕಸಭಾ ಚುನಾವಣೆಗೆ ತಯಾರಿ ನಡೆಸ್ತಿರೋ ಬಿಜೆಪಿ, ಇಂತಹ ಹಿರಿಯ ನಾಯಕರನ್ನು ಸೈಡ್ಲೈನ್ ಮಾಡ್ದೆ, ಅವ್ರನ್ನು ಗೌರವಪೂರ್ವಕವಾಗಿ ನಡೆಸಿಕೊಂಡು, ಅವ್ರಿಗೆ ತಕ್ಕದಾದ ಸ್ಥಾನಮಾನವನ್ನು ನೀಡಬೇಕು..ಟಿಕೆಟ್ ನೀಡಬೇಕು ಅನ್ನೋದು ಕಮಲ ಪಾಳಯದ ಕಾರ್ಯಕರ್ತರ ವಲಯದಲ್ಲಿ ಕೇಳಿಬರ್ತಿರೋ ಮಾತು.