ಕರ್ನಾಟಕವನ್ನು ಸಿದ್ದರಾಮಯ್ಯ ಸರ್ಕಾರ “ಪವರ್ ಲೆಸ್” ರಾಜ್ಯವನ್ನಾಗಿಸಿದೆ: ಕರ್ನಾಟಕ ಬಿಜೆಪಿ

ಬೆಂಗಳೂರು: ಕರ್ನಾಟಕವನ್ನು ಸಿದ್ದರಾಮಯ್ಯ ಅವರ ಸರ್ಕಾರ “ಪವರ್ ಲೆಸ್” ರಾಜ್ಯವನ್ನಾಗಿ ಮಾಡಿದ ಪರಿಣಾಮ ಉಂಟಾಗಿರುವ ಅನಾಹುತಗಳು ಬಗ್ಗೆ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಕತ್ತಲೋ ಕತ್ತಲೋ ಇದು ಬರದ ಕರುನಾಡಿಗೆ ಕಗ್ಗತ್ತಲು ಇದೇ ಕಾಂಗ್ರೆಸ್ಸಿನ ಗ್ಯಾರಂಟಿ ಎಂದ ಬಿಜೆಪಿ ಕಲೆಕ್ಷನ್ ಮಾಸ್ಟರ್ಸ್‌ಗಳ #ATMSarkara, IAS ಅಧಿಕಾರಿಗಳನ್ನೇ ಲೂಟಿಗೆ ಇಳಿಸಿದೆ ಎಂದು ಸಿದ್ದರಾಮಯ್ಯ ಅವರ ಸರ್ಕಾರ “ಪವರ್ ಲೆಸ್” ರಾಜ್ಯವನ್ನಾಗಿ ಮಾಡಿದ ಪರಿಣಾಮ ಉಂಟಾಗಿರುವ ಅನಾಹುತಗಳ ಪಟ್ಟಿ ಇಲ್ಲಿದೆ ನೋಡಿ.
▪️ದುಡಿಮೆ ಇಲ್ಲದೆ ಬೀದಿಗೆ ಬಿದ್ದ ನೇಕಾರರು
▪️ನೀರುಣಿಸಲಾಗದೆ ಕಂಗಾಲಾದ ರೈತರು
▪️ಕೈಗಾರಿಕೆಗಳ ಉತ್ಪಾದನೆಗೆ ಬಿತ್ತು ಪೆಟ್ಟು
▪️ಕಾರ್ಮಿಕರ ಉದ್ಯೋಗಕ್ಕೆ ಬಂದಿದೆ ಆಪತ್ತು
▪️ಹೊಸ ಕಂಪನಿಗಳು ಹೊರ ರಾಜ್ಯಗಳ ಪಾಲು
▪️ಕರುನಾಡಲ್ಲಿ ಕತ್ತಲು ಕಂಡು ಓಡಿದ ಹೂಡಿಕೆದಾರರು
ಎಫ್‌ಡಿಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಕೆಂಪು ಹಾಸಿಗೆ ಹಾಕಿ ಹಗಲು ದರೋಡೆ ಮಾಡುತ್ತಿರುವ ಕಲೆಕ್ಷನ್ ಮಂತ್ರಿ ಪ್ರಿಯಾಂಕ್ ಖರ್ಗೆ ಇದೀಗ ಕಿಯೋನಿಕ್ಸ್ ಸಂಸ್ಥೆಗೂ ಟಾರ್ಗೆಟ್ ಫಿಕ್ಸ್ ಮಾಡಿಸಿದ್ದಾರೆ. ಕಿಯೋನಿಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಾಕಿ ಬಿಲ್ ನೀಡುವುದಕ್ಕೆ ಪರ್ಸೆಂಟೇಜ್ ಲೆಕ್ಕದಲ್ಲಿ ಕಮಿಷನ್ ಕೇಳಿದ್ದಾರೆ ಎಂದು ಖುದ್ದು ಕಿಯೋನಿಕ್ಸ್ ಗುತ್ತಿಗೆದಾರರ ಸಂಘ ಬಹಿರಂಗಪಡಿಸಿದೆ.
ಕಲೆಕ್ಷನ್ ಮಾಸ್ಟರ್ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಕೂಡಲೇ ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಜತೆಗೆ ಕಲೆಕ್ಷನ್ ದಂಧೆಯ ಕುರಿತು ನ್ಯಾಯಾಂಗ ತನಿಖೆಗೆ ವಹಿಸಬೇಕು. ಸಮಾಜವಾದ ಮತ್ತು ಬಡವರ ಹೆಸರು ಹೇಳಿಯೇ ರಾಜಕಾರಣ ಮಾಡುತ್ತಾ ಬಂದಿರುವ ಸಿದ್ದರಾಮಯ್ಯ ಅವರು ವಾಸ್ತವದಲ್ಲಿ ಮಜಾವಾದಿ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ.
ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸುವುದಕ್ಕೆ ಕುಖ್ಯಾತಿ ಪಡೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಆರ್. ಡಿ. ಪಾಟೀಲ್, ಕಾನ್‌ಸ್ಟೇಬಲ್ ಪರೀಕ್ಷೆಯಲ್ಲೂ ಅಕ್ರಮ ನಡೆಸಲು ಹೊಂಚು ಹಾಕಿ ಕೂತಿದ್ದು ಬೆಳಕಿಗೆ ಬಂದಿದೆ.
ಪ್ರತಿಯೊಂದು ಪರೀಕ್ಷೆಯಲ್ಲೂ ಆರ್. ಡಿ. ಪಾಟೀಲ್ ರಾಜಾರೋಷವಾಗಿ ಅಕ್ರಮ ನಡೆಸಲು ಕಾರಣ ಆತನ ಬೆನ್ನಿಗೆ #ATMSarkara ನಿಂತಿರುವುದರಿಂದ. ಸಿಬಿಐ ತನಿಖೆಗೆ ವಹಿಸಿ ಎಂದರೆ #TrollMinister ಪ್ರಿಯಾಂಕ್ ಖರ್ಗೆ ಮೂಗು ಮುರಿಯುವುದಕ್ಕೆ ಕಾರಣ ತಮ್ಮ ಬುಡಕ್ಕೆ ಪ್ರಕರಣ ಬಂದು ಬೀಳಲಿದೆ ಎನ್ನುವುದು ಅವರಿಗೆ ಖಾತರಿಯಾಗಿದೆ ಎಂದು ರಾಜ್ಯ ಬಿಜೆಪಿ ಹೇಳಿದೆ.