NationalPolitics

ಒಳ್ಳೆಯ ಆಡಳಿತವನ್ನು ದುರಾಡಳಿತಕ್ಕೆ ಕೊಂಡೊಯ್ಯುವಲ್ಲಿ ಕಾಂಗ್ರೆಸ್ ಪರಿಣಿತಿ: ಕಾಂಗ್ರೆಸ್ ನ್ನು ಕುಟುಕಿದ ಪ್ರಧಾನಿ ಮೋದಿ

ಬೆಂಗಳೂರು: ರಾಷ್ಟ್ರದ ಪ್ರಗತಿಯನ್ನು ರಿವರ್ಸ್ ಗೇರ್‌ನಲ್ಲಿ ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ನಿಪುಣ. ಅವರನ್ನು ಕನಿಷ್ಠ100 ವರ್ಷಗಳ ಕಾಲ ಅಧಿಕಾರದಿಂದ ವಂಚಿತಗೊಳಿಸಿ ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ. ನವೆಂಬರ್ 17 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ,ಜನರು ಬಲೆಯಲ್ಲಿ ಬೀಳದಂತೆ ಎಚ್ಚರಿಸಿ, ಒಳ್ಳೆಯ ಆಡಳಿತವನ್ನು ಕೆಟ್ಟ ಆಡಳಿತಕ್ಕೆ ಕಾಂಗ್ರೆಸ್ ನವರು ಪರಿಣಿತರು” ಎಂದು ವಾಗ್ದಾಳಿ ನಡೆಸಿದರು.

ನವೆಂಬರ್ 17 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ,ಜನರು ಬಲೆಯಲ್ಲಿ ಬೀಳದಂತೆ ಎಚ್ಚರಿಸಿ, ಒಳ್ಳೆಯ ಆಡಳಿತವನ್ನು ಕೆಟ್ಟ ಆಡಳಿತಕ್ಕೆ ಪರಿವರ್ತಿಸುವಲ್ಲಿ ಕಾಂಗ್ರೆಸ್ ನವರು ಪರಿಣಿತರು” ಎಂದು ವಾಗ್ದಾಳಿ ನಡೆಸಿದರು.

ಸುಮಾರು 100 ವರ್ಷಗಳ ಹಿಂದೆ ಜಲಮೂಲಗಳ ಶ್ರೀಮಂತ ಪರಂಪರೆಯನ್ನು ಹೊಂದಿದ್ದ ಬುಂದೇಲಖಂಡದ ಜಲಸಂಕಟವನ್ನು ಪರಿಹರಿಸಲು ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ ಏನನ್ನೂ ಮಾಡಲಿಲ್ಲ, ಮತ್ತು ಅಲ್ಲಿನ ಜನರು ಬಹಳ ದಿನಗಳಿಂದ ಒಂದು ಹನಿ ನೀರಿಗಾಗಿ ಹಾತೊರೆಯುತ್ತಿದ್ದರು ಎಂದರು.

ಕಾಂಗ್ರೆಸ್‌ಗೆ ತನ್ನ ಹಿತಾಸಕ್ತಿಯೇ ಸರ್ವಶ್ರೇಷ್ಠವೇ ಹೊರತು ದೇಶದ ಹಿತಾಸಕ್ತಿಯಲ್ಲ, ಅಭಿವೃದ್ಧಿಗೂ ಅದಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್ ನಾಯಕರು ತಮ್ಮ ಬಾಯಲ್ಲಿ ಬೆಳ್ಳಿ ಚಮಚದೊಂದಿಗೆ ಜನಿಸಿದರು ಮತ್ತು ಅವರಿಗೆ ಬಡತನವನ್ನು ಗೇಲಿ ಮಾಡುವುದು “ಸಾಹಸ ಪ್ರವಾಸೋದ್ಯಮ” ಎಂದರು.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial