ನವದೆಹಲಿ: ಭಾರತದ ಸಶಸ್ತ್ರ ಪಡೆಗಳು ಇಸ್ರೇಲ್ ಕಂಪನಿಗಳ ಜೊತೆಗೆ ಲಾಂಗ್ ಎಂಡುರೆನ್ಸ್ ಡ್ರೋನ್‌ಗಳ ತುರ್ತು ಸಂಗ್ರಹಣೆಗೆ ಕಾಂಟ್ರಾಕ್ಟ್ ಮಾಡಿಕೊಂಡಿದೆ. ಆದ್ರೆ ಈ ಬಾರಿ ಆಮದು ಜೊತೆಗೆ ಕೆಲವು ಸಿಸ್ಟಮ್‌ಗಳನ್ನು ಭಾರತದಲ್ಲೇ ತಯಾರಿಸೋಕೆ ಪ್ಲಾನ್ ಮಾಡಿವೆ. ದೇಶದ ಮೂರು ಪಡೆಗಳಲ್ಲಿ, ಆರ್ಮಿ, ನೇವಿಗಳು ಇಸ್ರೇಲ್‌ನ ಎಲ್ಬಿಟ್ ಸಿಸ್ಟಮ್ಸ್ ಜೊತೆಗೆ ಪವರ್‌ಫುಲ್ Hermes 900 ಡ್ರೋನ್‌ಗಳ ಒಪ್ಪಂದಕ್ಕೆ ಕೈ ಹಾಕಿದ್ರೆ, ಏರ್‌ಫೋರ್ಸ್ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರಿ ಜೊತೆಗೆ Heron Mk2(ಹೆರಾನ್ ಮಾರ್ಕ್ 2) ಡ್ರೋನ್‌ಗಳ ಸಂಗ್ರಹಣೆ ಒಪ್ಪಂದ ಮಾಡಿಕೊಂಡಿದೆ.
ಈಗಾಗಲೆ ಇಂಡಿಯನ್ ಏರ್‌ಫೋರ್ಸ್ ಬಳಿ 4 Heron Mk2 ಡ್ರೋನ್‌ಗಳಿವೆ. ಲೇಹ್‌ನಲ್ಲಿ 2, ಅರುಣಾಚಲ ಪ್ರದೇಶದಲ್ಲಿ ಇನ್ನೆರಡನ್ನ ನಿಯೋಜನೆ ಮಾಡಲಾಗಿದೆ. ಇನ್ನು ಹೈದ್ರಾಬಾದ್‌ನಲ್ಲಿ ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್, ಇಸ್ರೇಲ್‌ನ ಎಲ್ಬಿಟ್ ಸಿಸ್ಟಮ್ಸ್ ಜೊತೆಗೆ ಇಸ್ರೇಲಿ ಡ್ರೋನ್ ಸಿಸ್ಟಮ್‌ಗಳನ್ನು ತಯಾರಿಸಲಿವೆ. ಇಲ್ಲಿನ Adani Elbit Unmanned Aerial Vehicle (UAV) Complexನಲ್ಲಿ Hermes 900 ಮತ್ತು Hermes 450 ಮಾನವರಹಿತ ಏರಿಯಲ್ ವಾಹನಗಳ ಕಾರ್ಬನ್ ಸಂಯೋಜಿತ ಉಪಕರಣಗಳನ್ನ ತಯಾರಿಸೊ ಒಪ್ಪಂದ ಮಾಡಿಕೊಂಡಿದೆ.