LatestNationalNewsPolitics

75 ಲಕ್ಷ ಅರ್ಹ ಕುಟುಂಬಗಳಿಗೆ ಸಿಗಲಿದೆ ಉಚಿತ ಎಲ್ ಪಿಜಿ ಗ್ಯಾಸ ಸಂಪರ್ಕ!

ನವದೆಹಲಿ: ಭಾರತದಲ್ಲಿ ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಕಲ್ಪಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಇದೀಗ ಉಜ್ವಲ ಯೋಜನೆಯನ್ನು ಮತ್ತೆ ಮೂರ ವರ್ಷಗಳ ಕಾಲ ವಿಸ್ತರಿಸಲು ಪ್ರಧಾನಿ ಮೋದಿ ಅಧ್ಯಕ್ಷತೆಯ ಕ್ಯಾಬಿನೆಟ್ ಅನುಮೋದನೆ ನೀಡಿದೆ.

1,650 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರಿಂದ ಬರೋಬ್ಬರ 75 ಲಕ್ಷ ಅರ್ಹ ಕುಟುಂಬಕ್ಕೆ ಉಜ್ವಲ ಯೋಜನೆಯಡಿ ಉಚಿತ ಎಲ್‌ಪಿಜಿ ಗ್ಯಾಸ್ ಸಂಪರ್ಕ ಸಿಗಲಿದೆ. ಈ ಯೋಜನೆ 2023-24ರಿಂದ 2025-26ರವರೆಗೆ ವಿಸ್ತರಣೆಯಾಗಿದೆ.

ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಕಡಿತಗೊಳಿಸಿತ್ತು. ಇತ್ತ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಒಟ್ಟು 400 ರೂಪಾಯಿ ಕಡಿತಗೊಂಡಿತ್ತು. ಇದೀಗ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡಲು ಸರ್ಕಾರ ನಿರ್ಧರಿಸಿದೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್ ಉಚಿತವಾಗಿ ನೀಡಲಾಗುತ್ತದೆ.

ಉಜ್ವಲ ಯೋಜನೆಯಡಿಯ ಗ್ಯಾಸ್ ಸಂಪರ್ಕ
14.2 ಕೆಜಿ ಸಿಂಗಲ್ ಸಿಲಿಂಡರ್ ಗ್ಯಾಸ್ ಸಂಪರ್ಕ: 2200 ರೂಪಾಯಿ
5ಕೆಜಿ ಡಬಲ್ ಸಿಲಿಂಡರ್ ಸಂಪರ್ಕ: 2200 ರೂಪಾಯಿ
5 ಕೆಜಿ ಸಿಂಗಲ್ ಸಿಲಿಂಡರ್ ಸಂಪರ್ಕ: 1300 ರೂಪಾಯಿ

ಇನ್ನು ಉಜ್ವಲ ಯೋಜನೆಯಡಿ ಪ್ರತಿ14.2 ಕೆಜಿ ಗ್ಯಾಸ್ ಸಿಲಿಂಡರ್ ಮೇಲೆ ಒಟ್ಟು 400 ರೂಪಾಯಿ ಸಬ್ಸಿಡಿ ಸಿಗಲಿದೆ. ಇನ್ನು ಪ್ರತಿ ವರ್ಷ ಸಬ್ಸಡಿ ಅಡಿಯಲ್ಲಿ 12 ಸಿಲಿಂಡರ್ ಪಡೆದುಕೊಳ್ಳಬಹುದು.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial