LatestNationalNews

ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ನಿಷೇಧಿಸಿದ ಯೋಗಿ ಆದಿತ್ಯನಾಥ್ ಸರ್ಕಾರ

ಲಖನೌ: ಹಲಾಲ್‌ ಪ್ರಮಾಣಿಕೃತ ಉತ್ಪನ್ನಗಳ ಮಾರಾಟಕ್ಕೆ ಉತ್ತರಪ್ರದೇಶ ಸರ್ಕಾರ ಶನಿವಾರ ನಿಷೇಧ ಹೇರಿದ್ದು, ಖಾದ್ಯ ಮತ್ತು ಸೌಂದರ್ಯವರ್ಧಕ ವಸ್ತುಗಳ ಮಾರಾಟಕ್ಕಾಗಿ ನಕಲಿ ಹಲಾಲ್‌ ಪ್ರಮಾಣಪತ್ರಗಳನ್ನು ನೀಡುವ ಮೂಲಕ ನಿರ್ದಿಷ್ಟ ಸಮುದಾಯದ ಗ್ರಾಹಕರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದಲ್ಲಿ ವಿವಿಧ ಸಂಸ್ಥೆಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ನಿಷೇಧವು ಔಷಧ ಸೇರಿದಂತೆ ಹಲಾಲ್‌ ಪ್ರಮಾಣಿಕೃತ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟಕ್ಕೆ ಅನ್ವಯವಾಗಲಿದೆ. ರಫ್ತು ಮಾಡುವ ಉತ್ಪನ್ನಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲಖನೌನ ಐಶ್‌ಭಾಗ್‌ ನಿವಾಸಿ ಶೈಲೇಂದ್ರ ಕುಮಾರ್‌ ಶರ್ಮಾ ಎಂಬುವವರು ನೀಡಿರುವ ದೂರಿನ ಆಧಾರದಲ್ಲಿ ಚೆನ್ನೈನ ಹಲಾಲ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ದೆಹಲಿಯ ಜಮಿಯತ್ ಉಲಮಾ-ಇ-ಹಿಂದ್ ಹಲಾಲ್ ಟ್ರಸ್ಟ್, ಮುಂಬೈನ ಹಲಾಲ್‌ ಕೌನ್ಸಿಲ್‌ ಆಫ್‌ ಇಂಡಿಯಾ, ಮಹಾರಾಷ್ಟ್ರದ ಜಮಿಯತ್‌ ಉಲಮಾ ಸಂಸ್ಥೆಗಳ ವಿರುದ್ಧ ಹಜರತ್‌ಗಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿವರಿಸಿವೆ.
2006 ರಲ್ಲಿ, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯಿದೆಯನ್ನು ಔಪಚಾರಿಕಗೊಳಿಸಲಾಗಿದ್ದು, ಇದರಲ್ಲಿ ಒಂದು FSSAI ಮತ್ತು ISI ಆಹಾರದ ಗುಣಮಟ್ಟವನ್ನು ಪರಿಶೀಲಿಸುತ್ತದೆ ಮತ್ತು ಅದಕ್ಕಾಗಿ ವ್ಯವಹರಿಸುವ ನಿರ್ದಿಷ್ಟ ಕಾಯಿದೆ 3 (1) ಎಂದು ಮಾನ್ಯತೆ ನೀಡಲಾಯಿತು. ಆಹಾರ ಉತ್ಪನ್ನಗಳು ಮತ್ತು ಇತರರ ಮೇಲೆ ಹಲಾಲ್ ಪ್ರಮಾಣೀಕರಣವು ರಾಜ್ಯದಲ್ಲಿ ಕಾನೂನುಬಾಹಿರವಾಗಿದೆ.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial