ಹಾನಗಲ್: ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ಅನುದಾನ, ಸಹಜ ಕೃಷಿಗೆ 1 ಕೋಟಿ ರೈತರನ್ನು ತೊಡಗಿಸುವುದು, ವೆಜಿಟೆಬಲ್ ಕ್ಲಸ್ಟರ್ ಸ್ಥಾಪಿಸಲು ನಿರ್ಧರಿಸುವ ಮೂಲಕ ಕೃಷಿ ಕ್ಷೇತ್ರವನ್ನು ಆತ್ಮನಿರ್ಭರಗೊಳಿಸಲು ದಿಟ್ಟ ಹೆಜ್ಜೆಯನ್ನು ಇಡಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶಾಂ ಶೆಟ್ಟರ ತಿಳಿಸಿದರು. ಮೂಲಭೂತ ಸೌಕರ್ಯಕ್ಕೆ 11 ಲಕ್ಷ ಕೋಟಿ, ಕೈಗಾರಿಕೆ ಕ್ಲಸ್ಟರ್ ಸ್ಥಾಪನೆ, ಮುದ್ರಾ ಯೋಜನೆ ಸಾಲಮಿತಿ ಹೆಚ್ಚಳ, ಎಮ್ ಎಸ್ ಎಮ್ ಇ ಗಳಿಗೆ ಪ್ರೋತ್ಸಾಹದಿಂದಾಗಿ ಕೋಟ್ಯಂತರ ಉದ್ಯೋಗಗಳು ಸೃಷ್ಟಿಯಾಗಲಿವೆ. ಮಾಧ್ಯಮ ವರ್ಗ, ಯುವಕರು, ಮಹಿಳೆಯರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿದ್ದು, ಇದು ವಿಕಸಿತ ಭಾರತ ಕಲ್ಪನೆಗೆ ಪೂರಕವಾದ ಬಜೆಟ್ ಆಗಿದೆ ಎಂದರು.