ವಿದ್ಯಾರ್ಥಿಗಳ ಶಿಷ್ಯ ವೇತನ ಹಾಗೂ ಪ್ರೋತ್ಸಾಹ ಧನಕ್ಕೆ ರಾಜ್ಯ ಸರಕಾರ ಕನ್ನ ಹಾಕುತ್ತಿರುವುದನ್ನು ಖಂಡಿಸಿ ಎಸ್ ಎಫ್ ಐ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ದ ಗಿ
ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ದಿಂದ ಎಸ್ಎಮ್ಎಸ್, ಹೊಸಮಠ ಕಾಲೇಜ್ ವಿದ್ಯಾರ್ಥಿಗಳು ಮೆರವಣಿಗೆ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಆಗಮಿಸಿ, ವೃತ್ತದಲ್ಲಿ ಮಾನವ ಸರಪಳಿಯ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, ಒಂದು ದೇಶ ಒಂದು ರಾಜ್ಯ ಅಭಿವೃದ್ಧಿ ಹೊಂದಬೇಕು ಅಂದರೆ, ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಅಂತ ಶಿಕ್ಷಣದಿಂದ ಶತಮಾನಗಳ ಕಾಲ ವಂಚಿತರಾಗಿದ್ದ ಸಮುದಾಯದ ಮಕ್ಕಳಿಗೆ ಸರ್ಕಾರಿ ಯೋಜನೆಗಳು ಆಸರೆ ಆಗಬೇಕಾಗಿತ್ತು ಬದಲಾಗಿ ಪರಿಸ್ಕೃತ ಆದೇಶದ ಮೂಲಕ ಇತ್ತೀಚಿಗೆ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮಾಡಿದ ಆದೇಶದಿಂದ ಆ ಸಮುದಾಯದ ಮಕ್ಕಳನ್ನು ಮತ್ತಷ್ಟು ಕತ್ತಲ ಕೋಪಕ್ಕೆ ತಳ್ಳುತ್ತಿವೆ ತಾವುಗಳು ಸದಾ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ಮಾಡಿದೆ ಎಂದು ಹೇಳುವ ನೀವುಗಳು ನಿಮ್ಮ ಸರ್ಕಾರದಲ್ಲಿ ಸದ್ದಿಲ್ಲದೆ ಅಹಿಂದ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಶುಲ್ಕ ಮರುಪಾವತಿ ಯೋಜನೆಗಳಿಗೆ ಕತ್ತರಿ ಬಿದ್ದಿದೆ.
ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರತ್ಯೇಕವಾಗಿ ಪರಿಸ್ಕೃತ ಆದೇಶದ ಮೂಲಕ ಪ್ರೋತ್ಸಾಹಧನ ಹಾಗೂ ಶುಲ್ಕ ಮರುಪಾವತಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ.ರಾಜ್ಯದ ವಿದ್ಯಾರ್ಥಿಗಳಿಗೆ ಕ್ಷೀರ ಭಾಗ್ಯ, ಶೂ ಭಾಗ್ಯ, ಮೊಟ್ಟೆ ಭಾಗ್ಯ ಕಲ್ಪಸಿರಿವು ನೀವುಗಳು ಶುಲ್ಕ ಮರುಪಾವತಿ ಮತ್ತು ಪ್ರೋತ್ಸಾಹ ಹಣದ ಮೇಲೆ ಯಾಕೆ ನಿಮ್ಮ ಕಣ್ಣು ದೀಪದ ಕೆಳಗೆ ಕತ್ತಲೆ ಎನ್ನುವ ಹಾಗೆ ಅಹಿಂದ ವರ್ಗದ ಸಮುದಾಯದ ಹೆಸರಿನಲ್ಲಿ ಸರ್ಕಾರ ನಡೆಸುತ್ತಿರುವ ನೀವುಗಳು ಅದೇ ಅಹಿಂದ ವರ್ಗದ ಸಮುದಾಯದ ಮಕ್ಕಳಿಗೆ ಆಗುತ್ತಿರಿವು ಅನ್ಯಾಯ ಕಾಣುತ್ತಿಲ್ಲವೇ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಹಿಂದಿನ ಆದೇಶದಲ್ಲಿ ಶೇಕಡಾ 60 ರಿಂದ 74.99 ಫಲಿತಾಂಶ ದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಪ್ರಥಮ ಭಾರಿಗೆ ಉತ್ತೀರ್ಣರಾದರೆ 7000 ರೂಪಾಯಿ ಪ್ರೋತ್ಸಾಹ ಧನ ಹಣವನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ಕೊಡಲಾಗುತ್ತಿತ್ತು ಈ ಶೈಕ್ಷಣಿಕ ವರ್ಷದಲ್ಲಿ ಪರಿಸ್ಕೃತ ಆದೇಶದಲ್ಲಿ ಶೇಕಡಾ 60 ರಿಂದ 74.99 ಫಲಿತಾಂಶಕ್ಕೆ ಇದ್ದ ಪ್ರೋತ್ಸಾಹ ಧನ ಯೋಜನೆ ರದ್ದು ಮಾಡಲಾಗಿದೆ ಇದು ವಿದ್ಯಾರ್ಥಿಗಳ ವಿರೋಧಿ ನೀತಿ ಅಲ್ಲವೇ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ತನ್ನ ಪರಿಷ್ಕೃತ ಆದೇಶದಲ್ಲಿ ಈ ಶೈಕ್ಷಣಿಕ ವರ್ಷದಿಂದ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡುವುದಿಲ್ಲ ಸರಕಾರಿ ಕಾಲೇಜ್ ಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ಶುಲ್ಕ ಮರುಪಾವತಿ ಎಂದು ಹೇಳಲಾಗಿದೆ ಈ ರೀತಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೆಟ್ಟು ಕೊಡತಕ್ಕಂಥ ಕೆಲಸವನ್ನು ಇಲಾಖೆಯ ಉನ್ನತ ಅಧಿಕಾರಿಗಳಿಂದ ಆಗುತ್ತಿದೆ ಎಂದರು.
ಎಸ್ಎಫ್ಐ ಜಿಲ್ಲಾ ಮುಖಂಡ ನೇಹಾಲ್ ಖಾನ್ ಗಂಗಾವತಿ ಮಾತನಾಡಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಈ ಹಿಂದೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು P.hd ಮಾಡಿದರೆ ಅವರಿಗೆ ಪ್ರತಿ ತಿಂಗಳು 25000 ಸಾವಿರ ರೂಪಾಯಿ ಹಣವನ್ನು ಪೇಲ್ ಶೀಪ್ಯಗಾಗಿ ಕೊಡುತ್ತ ಇದ್ದರು ಅದನ್ನು ಕೋವಿಡ್ ಸಮಯದಲ್ಲಿ BJP ಸರಕಾರ 10000 ಸಾವಿರ ರೂಪಾಯಿಕ್ಕೆ ಇಳಿಸಿತ್ತು ತಾವುಗಳು ಯಾವಾಗಲೂ ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳೇ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಆಗಿರವು ಅನ್ಯಾಯವನ್ನು ಸರಿಪಡಿಸಿ ಮತ್ತೆ ಪುನಃ 25000 ಸಾವಿರ ರೂಪಾಯಿ ಫೇಲ್ ಶೀಪ್ ಹಣ ಕೊಡಲು ಸೂಚನೆ ಕೋಡಿ, ಅಹಿಂದ ವರ್ಗದ ನೇತರೇ ಎಂದು ಕರೆಸಿಕೊಳ್ಳುತ್ತಿರುವ ನೀವು ನಿಮ್ಮ ಸರ್ಕಾರದಲ್ಲಿ ಅಹಿಂದ ವರ್ಗದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಈ ಹಿಂದೆ ಇದ್ದ ಆದೇಶದ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವರ್ಗದ ಎಲ್ಲಾ ವಿದ್ಯಾರ್ಥಿಗಳ ಪ್ರೋತ್ಸಾಹ ಧನ, ಶುಲ್ಕ ಮರುಪಾವತಿಗೆ ಹಾಕಿರಿವು ಕತ್ತರಿ ನಿಲ್ಲಿಸಿ ಎಲ್ಲಾ ವರ್ಗದ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಹಳೆ ಆದೇಶವನ್ನು ಜಾರಿ ಮಾಡಬೇಕೆಂದು ಆಗ್ರಹಿಸಿ ಇಂದು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಮೂಲಕ ಮನವಿ ಸಲ್ಲಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಅರ್ಜುನ್ ರಜಪುತ, ದೇವರಾಜ್ ಅರಕಸಾಲಿ, ಮಹೇಶ್ ಮರೋಳ, ಸುಲೇಮಾನ್ ಮತ್ತಿಹಳ್ಳಿ, ದುರ್ಗಪ್ಪ ಯಮ್ಮಿಯವರ , ಲಕ್ಷ್ಮಿ ಕೋರವರ, ಶೃತಿ ಆರ್ ಎಮ್, ಮುತ್ತು ಎಚ್, ವಿಜಯ ಶಿರಹಟ್ಟಿ, ಲಕ್ಷ್ಮೀ ಆರ್ ಕೆ, ಭಾವನ ಕೆ ಎಚ್, ಲಾವಣ್ಯ ಆರ್ ಡಿ, ಭವ್ಯ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.