ಹಾನಗಲ್ : ಬೈಚವಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾರ್ವಜನಿಕ ಬಂದು ಹೋಗಲು ಅನುಕೂಲ ಕಲ್ಪಿಸಲು ಸಾರಿಗೆ ಸಂಸ್ಥೆಯ ಕೋರಿಕೆ ನಿಲುಗಡೆ ಕಲ್ಪಿಸಲಾಗಿದೆ.
ಕರ್ನಾಟಕ ಸರ್ಕಾರದ ಗ್ಯಾರಂಟಿ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ್ ದೊಡ್ಡಮನಿ ಅವರ ಒತ್ತಾಸೆ ಹಿನ್ನೆಲೆಯಲ್ಲಿ ಬೈಚವಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಕೆಎಸ್ಆರ್ಟಿಸಿಯ ಕೋರಿಕೆಯ ಬೋರ್ಡ್ ಅಳವಡಿಸಿ ಬಸ್ಸುಗಳಿಗೆ ನಿಲ್ಲಲು ಅವಕಾಶ ಕಲ್ಪಿಸಲಾಯಿತು. ಕೆಪಿಸಿಸಿ ಸದಸ್ಯ ಖಾಜಾ ಮೈನುದ್ದೀನ್ ಜಮಾದಾರ್, ಗ್ರಾ.ಪಂ. ಸದಸ್ಯ ಬಸವಣ್ಣಪ್ಪ ಓಲೆಕಾರ್,ಆರೋಗ್ಯ ಸಲಹಾ ಸಮಿತಿ ಸದಸ್ಯ ಸೈಯದ್ ಇನಾಮ್ದಾರ್, ಉಮೇಶ್ ದಾನಪ್ಪನವರ್ ಮುಖಂಡರಾದ ಶ್ರೀಕಾಂತ್ ಅರಳೇಶ್ವರ, ಶಿವಪ್ಪ ಗೊಲ್ಲರ, ರಜಾಕ್ ದೊಡ್ಡಮನಿ, ಪ್ರಕಾಶ್ ನಾಯಕ, ರಾಮಚಂದ್ರ ಚಿಕ್ಕೇರಿ, ವೈದ್ಯಾಧಿಕಾರಿ ಡಾ. ವಿರುಪಾಕ್ಷಪ್ಪ,ಹಿರಿಯರಾದ ವಿಟ್ಟಲ್ ಮಾಂಗ್ಲೆನವರ್,ಮಲ್ಲನಗೌಡ ದೊಡ್ಡ ಗೌಡ, ಮಾರುತಿ ನಾಗನೂರು, ಮಾರುತಿ ಹಳೆ ಬಂಕಾಪುರ, ಸೇರಿದಂತೆ ಆರೋಗ್ಯ ಸಲಹಾ ಸಮಿತಿಯ ಸದಸ್ಯರು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ನಾಗರಿಕರು ಹಾಜರಿದ್ದರು.