
ರಾಣೆಬೇನ್ನೂರು: ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಬಿಜೆಪಿ ನಾಯಕ ಸಂತೋಷಕುಮಾರ ಪಾಟೀಲ ಅವರ ಚಿಕ್ಕಪ್ಪನರಾದ ಆರ್ ಎಚ್ ಪಾಟೀಲ ಅವರ 75 ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಕೋಟಿಹಾಳ ಗ್ರಾಮದಲ್ಲಿ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜುಲೈ 25 ರಂದು ಬೆಳಿಗ್ಗೆ 9. ಗಂಟೆಗೆ ಸರಿಗಮಪ ಖ್ಯಾತಿಯ ಹನುಮಂತಪ್ಪ ಲಮಾಣಿ ಮತ್ತು ಅವರ ತಂಡದ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

