ಹಾವೇರಿ: ಅವೈಜ್ಞಾನಿಕ ಪ್ಯಾನಿಕ್ ಬಟನ್ ಹಾಗೂ ಜಿ.ಪಿ.ಎಸ್ ಅವಳಡಿಕೆ ವಿರೋಧಿಸಿ ಟ್ಯಾಕ್ಸಿ ವಾಹನಗಳ ಮಾಲಿಕರು ಹಾಗೂ ಚಾಲಕರು ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನೆ ಮೆರವಣಿಗೆ ಮೂಲಕ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಸರ್ಕಾರದ ಶಕ್ತಿ ಯೋಜನೆ ಬಂದಾಗಿನಿಂದ ಖಾಸಗಿ ವಾಹನಗಳ ಮಾಲಕರು,ಚಾಲಕರ ಸ್ಥಿತಿ ಗಂಭೀರವಾಗಿದೆ. ಕೊರೊನಾ ಅಲೆಯಿಂದ ಆರ್ಥಿಕ ಸಂಕಷ್ಟ ಎದುರಿಸಿದ್ದೇವೆ.ಈ ವೈಜ್ಞಾನಿಕವಾಗಿ ರೀತಿಯಲ್ಲಿ ಹೊಸ ಹೊಸ ರೂಲ್ಸ್ ಟ್ಯಾಕ್ಸಿ ವಾಹನಗಳ ಮೇಲೆ ಹೇರಲಾಗುತ್ತಿದೆ ಎಂದು ದೂರಿದರು.
ನಮಗೆ ಯಾವುದೇ ಆದಾಯವಿಲ್ಲದೆ. ನಾವು ತುಂಬಾ ನಷ್ಟದಲ್ಲಿ ಜೀವನ ನಡೆಸುತ್ತಿದ್ದೇವೆ. ಡಿಸೇಲ್/ಪೆಟ್ರೋಲ್ ಬೆಲೆ ಏರಿಕೆ, ಕಡ್ಡಾಯವಾಗಿ ಹೆಚ್.ಎಸ್.ಆರ್.ಪಿ ನಂಬರ ಪ್ಲೇಟ್ ಅಳವಡಿಕೆ,ಪ್ಯಾನಿಕ ಬಟನ್ ಕಡ್ಡಾಯವಾಗಿ ಅಳವಡಿಕೆ,ಇನ್ಸೂರೆನ್ಸ್ ಹಾಗೂ ಟ್ಯಾಕ್ಸ್ ಏರಿಕೆ. ಟೋಲ್ ಶುಲ್ಕ ಏರಿಕೆ ಜೀವನ ನಡೆಸುವುದು ಕಷ್ಟವಾಗಿದೆ.
ಕ್ಯೂ.ಆರ್.ಸಿ ಕೋಡ ಸ್ಪೀಕರ್ ಕ್ಯಾನ್ಸಲ್, ಇತ್ತೀಚಿಗೆ ಜಾರಿಗೆ ತಂದಂತಹ ಪ್ಯಾನಿಕ್ ಬಟನ್ ಹಾಗೂ ಜಿಪಿಎಸ್ ಅಳವಡಿಕೆಯನ್ನು ಹಳೆಯ ವಾಹನಗಳನ್ನು ಹೊರೆತುಪಡಿಸಿ ಕಡ್ಡಾಯವಾಗಿ ಹೊಸ ವಾಹನಗಳಿಗೆ ಅಳವಡಿಸಬೇಕು.ಜಿಲ್ಲೆಯಾಗಿ ಈವರೆಗೂ ನಮ್ಮ ಸಂಘಕ್ಕೆ ಯಾವುದೇ ಸ್ಟ್ಯಾಂಡ ಒದಗಿಸಿರುವುದಿಲ್ಲ. ಸಂಘಕ್ಕೆ ಜಾಗೆಯನ್ನು ಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಿವಲಿಂಗೇಶ್ವರ ಟ್ಯಾಕ್ಸಿ ಚಾಲಕರು ಮತ್ತು ಮಾಲಿಕರು ಸಂಘ ಅಧ್ಯಕ್ಷ ವೀರಪಾಕ್ಷ ದಳಗಾರ, ಬಸವೇಶ್ವರ ಸಂಘ ಹಾನಗಲ್ ರೋಡ್ ಐ.ಬಿ.ಜೀಗಳೂರು, ಕೆಟಿಡಿಓ ಸಂಘದ ಅಧ್ಯಕ್ಷ ಚಂದನ ಬಾಬು ರಾಣೆಬೇನ್ನೂರು ಸೇರಿದಂತೆ ಚಾಲಕರು ಮತ್ತು ಮಾಲಿಕರು ಹಾಜರಿದ್ದರು.