Bengaluru CityLatestNationalTech

ಭೂಮಿ ವಾತಾವರಣಕ್ಕೆ ಚಂದ್ರಯಾನ-3 ರಾಕೆಟ್ ಮರು-ಪ್ರವೇಶ: ಇಸ್ರೋ

ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ಹಿಂದೆ ಉಡಾವಣೆ ಮಾಡಿದ್ದ ಚಂದ್ರಯಾನ 3 ಲಾಂಚ್ ವೆಹಿಕಲ್ ಮೇಲ್ಭಾಗವು ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದ್ದು ಬಹುಶಃ ಉತ್ತರ ಫೆಸಿಫಿಕ್ ಸಮುದ್ರದಲ್ಲಿ ಬೀಳಬಹುದು ಎಂದು ತಿಳಿದುಬಂದಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದ್ದು, “ಎಲ್‌ವಿಎಂ3 ಎಂ4 ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಭಾಗವು ಭೂಮಿಯ ವಾತಾವರಣಕ್ಕೆ ಬುಧವಾರ ಸುಮಾರು 14:42ರ ಅವಧಿಯಲ್ಲಿ ಅನಿಯಂತ್ರಿತ ಮರು ಪ್ರವೇಶ ಮಾಡಿದ್ದು, ಬಹುಶಃ ಫೆಸಿಫಿಕ್ ಸಮುದ್ರದಲ್ಲಿ ಬೀಳುವ ಸಾಧ್ಯತೆ ಇದೆ. ಈ ರಾಕೆಟ್ ಬಾಡಿ ಜುಲೈ 14 ರಂದು 21.3 ಡಿಗ್ರಿ ಇಳಿಜಾರಿನೊಂದಿಗೆ 133 ಕಿಮೀ x 35823 ಕಿಮೀ ಉದ್ದೇಶಿತ ಕಕ್ಷೆಗೆ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಂಜೆಕ್ಟ್ ಮಾಡಿದ ವಾಹನದ ಭಾಗವಾಗಿದೆ ಎಂದು ಇಸ್ರೋ ಹೇಳಿದೆ. ಲಾಂಚ್ ಆದ 124 ದಿನಗಳ ಬಳಿಕ ರಾಕೆಟ್ ಬಾಡಿ ವಾಪಸ್ ಭೂಮಿಯ ವಾತಾವರಣವನ್ನು ಪ್ರವೇಶಿಸಿದೆ. ಇಂಟರ್-ಏಜೆನ್ಸಿ ಸ್ಪೇಸ್ ಡೆಬ್ರಿಸ್ ಕೋಆರ್ಡಿನೇಷನ್ ಕಮಿಟಿ (ಐಎಡಿಸಿ) ಶಿಫಾರಸು ಮಾಡಿದ ಲೋ ಅರ್ಥ್ ಆರ್ಬಿಟ್ ಆಬ್ಜೆಕ್ಟ್‌ಗಳಿಗೆ 25 ವರ್ಷಗಳ ನಿಯಮವನ್ನು ಸಂಪೂರ್ಣವಾಗಿ ಅನುಸರಿಸುತ್ತಿದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial