ಪಯಣ ನಿಲ್ಲಿಸಿದ ‘ಕಾಲಿಪೀಲಿ’ : ವೈರಲ್ ಆಯ್ತು ಆನಂದ್ ಮಹಿಂದ್ರಾ ಟ್ವೀಟ್
ಮುಂಬೈ: ಜನಜೀವನದ ಜೀವನಾಡಿ ಎಂದೇ ಕರೆಯಿಸಿಕೊಂಡಿದ್ದ ಕಾಲಿ ಪೀಲಿ ಎಂದೇ ಹೆಚ್ಚಾಗಿ ಚಿರಪರಿಚಿತವಾಗಿದ್ದ ಮುಂಬೈಯ ಪ್ರೀಮಿಯರ್ ಪದ್ಮಿನಿ ಇಂದಿನಿಂದ ತಮ್ಮ ಸೇವೆಯನ್ನು ನಿಲ್ಲಿಸಲಿವೆ.
ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಮುಂಬೈ ಜನರೊಂದಿಗೆ ಟ್ಯಾಕ್ಸಿ ಪ್ರಯಾಣ ಯಾವ ರೀತಿಯ ಬಾಂಧವ್ಯವನ್ನು ಸೃಷ್ಟಿಸಿದೆ ಎಂಬುದನ್ನು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, ಅನೇಕ ಕೆಟ್ಟ ಕೆಲಸಗಳಿಗೂ ಈ ಟ್ಯಾಕ್ಸ್ ಬಳಕೆಯಾಗಿದ್ದೂ ಇದೆ ಒಟ್ಟಿನಲ್ಲಿ ಈ ಟ್ಯಾಕ್ಸಿಗಳು ರಸ್ತೆಯಲ್ಲಿ ಗದ್ದಲವನ್ನುಂಟು ಮಾಡುವ, ಅಹಿತಕರ, ವಿಶ್ವಾಸಾರ್ಹವಲ್ಲದ ನಂಟನ್ನು ಹೊಂದಿದ್ದರೂ ನನ್ನ ಕಾಲದ ಜನರಿಗೆ ಈ ಟ್ಯಾಕ್ಸಿಗಳ ನೆನಪು ಅತ್ಯಂತ ಮಹತ್ವದ್ದು ಎಂದು ತಿಳಿಸಿದ್ದಾರೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕು ಎಂದರೆ ಟ್ಯಾಕ್ಸಿ ಎಂಬ ಧ್ವನಿ ಮಾಡಿದರೆ ಸಾಕು ಥಟ್ಟನೆ ಮುಂದೆ ಬಂದು ನಿಲ್ಲುತ್ತಿದ್ದವು ಅಂತಿಮ ವಿದಾಯ ಕಾಲಿ ಪೀಲಿ ಟ್ಯಾಕ್ಸಿ. ಒಳ್ಳೆಯ ದಿನಗಳನ್ನು ನೀಡಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಟ್ಯಾಕ್ಸಿಯಾಗಿ ಪ್ರೀಮಿಯರ್ ಪದ್ಮಿನಿಯ ಪ್ರಯಾಣವು 1964 ರಲ್ಲಿ ‘ಫಿಯಟ್-1100 ಡಿಲೈಟ್’ ಮಾದರಿಯೊಂದಿಗೆ ಪ್ರಾರಂಭವಾಯಿತು ಸ್ಟೀರಿಂಗ್-ಮೌಂಟೆಡ್ ಗೇರ್ ಶಿಫ್ಟರ್‌ನೊಂದಿಗೆ ಪ್ರಬಲ 1200-ಸಿಸಿ ಕಾರಾಗಿ ಇದು ಖ್ಯಾತಿ ಪಡೆದುಕೊಂಡಿತ್ತು.