ರಾಣೆಬೇನ್ನೂರು : ಲೋಕೋಪಯೋಗಿ ಇಲಾಖೆಯಲ್ಲಿ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ರಾಣೆಬೇನ್ನೂರು ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ರೋಹಿತ್ ಯಶವಂತ ಗುತ್ತಲ ಎಂಬ ವ್ಯಕ್ತಿ ಸಚಿವೆ ಲಕ್ಷ್ಮೀ ಹೇಬ್ಬಾಳ್ಕರ್, ಹಿರಿಯ ಅಧಿಕಾರಿಗಳು, ರಾಜಕಾರಣಿಗಳೊಂದಿಗೆ ತಾನು ತೆಗೆಸಿಕೊಂಡ ಪೋಟೋ ತೋರಿಸಿ ಯುವಕ – ಯುವತಿಯರಿಗೆ ಲೋಕೋಪಯೋಗಿ ಇಲಾಖೆಯಲ್ಲಿ ಸರಕಾರಿ ನೌಕರಿ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ. ಪ್ರತಿಯೊಬ್ಬರಿಂದ 10 ರಿಂದ 13 ಲಕ್ಷ ಹಣ ಹಾಕಿಸಿಕೊಂಡಿದ್ದ ಎನ್ನಲಾಗಿದೆ. ಸಧ್ಯ 18 ಜನರಿಂದ 68,20,775 ರೂಪಾಯಿ ವಂಚನೆ ಆಗಿರುವುದು ದೂರಿನಲ್ಲಿ ದಾಖಲಾಗಿದೆ.
ಪೂರ್ತಿ ಹಣ ನೀಡಿದವರಿಗೆ ನಕಲಿ ಆದೇಶ ಪತ್ರ: ಸರಕಾರಿ ಉದ್ಯೋಗ ಕೊಡಿಸುವ ಆಮಿಷ್ಯವೊಡ್ಡಿ ಪೂರ್ತಿ ಹಣ ನೀಡಿದವರಿಗೆ ದಾವಣಗೆರೆ ಲೋಕೋಪಯೋಗಿ ಇಲಾಖೆಗೆ ಹೋಗಿ ಜಾಯಿನ್ ಆಗಿ ಎಂದು ನಕಲಿ ಆದೇಶ ಪತ್ರ ನೀಡಿದ್ದ ಎನ್ನಲಾಗಿದೆ.
ಆದೇಶ ಪತ್ರ ಹಿಡಿದು ಕೆಲಸಕ್ಕೆ ಸೇರಲು ಹೋದಾಗ ವಂಚನೆಗೊಳಗಾಗಿದ್ದು ಬಯಲಿಗೆ ಬಂದಿದೆ. ವಂಚನೆಗೊಳಗಾದವರು ರೋಹಿತ್ ವಿರುದ್ದ ರಾಣೇಬೆನ್ನೂರು ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ.2021 ರಿಂದ ಹಂತ ಹಂತವಾಗಿ ಯುವಕ- ಯುವತಿಯರಿಂದ ಹಣ ಹಾಕಿಸಿಕೊಂಡು ಬಂದಿದ್ದಾನೆ.ಸಧ್ಯ 18 ಜನ ವಂಚನೆಗೊಳಗಾದವರಿಂದ ದೂರು ದಾಖಲಾಗಿದೆ.