ಬಿಜೆಪಿ ೪೦ ಪರ್ಸೆಂಟ್ ಸರ್ಕಾರ ಅಂತ ಪುಂಖಾನುಪುಂಖವಾಗಿ ಆರೋಪ ಮಾಡ ಕಾಂಗ್ರೆಸ್ ಬುಡಕ್ಕೆ ಈಗ ಕಮಿಷನ್ ಆರೋಪದ ನಂಟು ಬೆಸೆದುಕೊಂಡಿದೆ..೪೦ ಪರ್ಸೆಂಟ್ ಕಮಿಷನ್ ಅಸ್ತ್ರವನ್ನೆ ಚುನಾವಣೆಯಲ್ಲಿ ಬಳಸಿಕೊಂಡಿದ್ರು ಕೈ ನಾಯಕರು..ಆದ್ರೆ ಈಗ ಅದೇ ಕಮಿಷನ್ ಸುಳಿಯಲ್ಲಿ ಕಾಂಗ್ರೆಸ್ ಸಿಲುಕಿ ಒದ್ದಾಡ್ತಿದೆ.ಅದು ಕೂಡ ಈ ಕಮಿಷನ್ ಬಿರುಗಾಳಿಯಲ್ಲಿ ಸಿಲುಕಿರೋದು ಸಿಎಂ ಸಿದ್ದರಾಮಯ್ಯ.ಹಾಗ್ಂತ ಈ ಮಾತನ್ನು ನಾವು ಹೇಳ್ತಾ ಇಲ್ಲ..ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ..ನೀವು, ನಿಮ್ಮ ಮಗ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿಲ್ಲ ಅಂತ ಗಣಪತಿ ದೇವಸ್ಥಾನದಲ್ಲಿ ಆಣೆ, ಪ್ರಮಾಣ ಮಾಡಿ ಅಂತ ಚಾಲೆಂಜ್ ಮಾಡಿದ್ದಾರೆ..ಕೋಲಾರದ ಕುರುಡು ಮನೆ ಗಣಪತಿ ದೇವಾಲಯದ ಎದುರು ಗುಡುಗಿದ್ದಾರೆ.ಈ ಹಿಂದೆ ಬಿಜೆಪಿ ಸರ್ಕಾರದ ಮೇಲೆ ವರ್ಗಾವಣೆ ಆರೋಪ ಮಾಡ್ತಿದ್ರಿ.ಆದ್ರೆ ಈಗಿನ ಸರ್ಕಾರ ಸಂಪೂರ್ಣ ದಂಧೆಯಲ್ಲಿಯೇ ಮುಳುಗಿಹೋಗಿದೆ.ಬೇಕಾದ್ರೆ ಹಾಲಿ ಅಥವಾ ನಿವೃತ್ತ ಜಡ್ಜ್ ನೇಮಕ ಮಾಡಿ ತನಿಖೆ ಮಾಡಿಸಲಿ..ನನಗೂ ಮಕ್ಕಳಿದ್ದಾರೆ..ಒಂದ್ವೇಳೆ ಇದು ಸುಳ್ಳು ಆಗಿದ್ರೆ ಕುರುಡು ಮನೆ ಗಣಪತಿ ನನಗೆ ಏನು ಬೇಕಾದರೂ ಶಾಪ ಕೊಡಲಿ ಅಂತ ಆಕ್ರೊಶ ಹೊರಹಾಕಿದ್ದಾರೆ..ಈಗಿನ ಎಲ್ಲಾ ವರ್ಗಾವಣೆಯನ್ನು ಸಿದ್ದರಾಮಯ್ಯ ಗಮನಕ್ಕೆ ತರಬೇಕಂತೆ..ಈಗಾಗಲೇ ಸರ್ಕಾರದಲ್ಲಿ ವರ್ಗಾವಣೆ ದಂಧೆ ಶುರುವಾಗಿದೆ ಕೂಡ..ಮಾತೆತ್ತಿದ್ರೆ ಬಿಜೆಪಿ ಸರ್ಕಾರ ೪೦ ಪರ್ಸೆಂಟ್ ಸರ್ಕಾರ ಅಂತ ಗಂಟಲು ಹರಿದುಕೊಳ್ತಿದ್ದ ಕೈ ನಾಯಕರೇ ಈಗ ತಾವೇ ಭ್ರಷ್ಟಾಚಾರದ ಕೂಪದಲ್ಲಿ ಬಿದ್ದಿದ್ದಾರೆ..ಈ ರೀತಿ ಮಾತುಗಳು ರಾಜಕೀಯ ವಲಯದಲ್ಲಿ ಓಡಾಡ್ತಿದೆ..ಅದ್ರಲ್ಲೂ ಇದಕ್ಕೆ ಪುಷ್ಟಿ ನೀಡುವಂತೆ ಸಿವಿಲ್ ಕಾಂಟ್ರ್ಯಾಕ್ಟರ್ ಗಳಂತೂ ನೇರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧವೇ ಕಮಿಷನ್ ಆರೋಪ ಮಾಡಿದ್ರು. .ಆದ್ರೆ ಇದಕ್ಕೂ ತಮಗೂ ಸಂಬಂಧಾನೆ ಇಲ್ಲ ಅಂತ ನುಣುಚಿಕೊಂಡಿದ್ರು ಡಿಕೆಶಿ..