
ಹಾನಗಲ್ : ಆಂಧ್ರ ಪ್ರದೇಶ,ಬಿಹಾರ ಸೇರಿದಂತೆ ಎನ್‌ಡಿಎ ಮಿತ್ರ ಪಕ್ಷಗಳು ಪ್ರತಿನಿಧಿಸುವ ರಾಜ್ಯಗಳಿಗೆ
ಯಥೇಚ್ಛವಾಗಿ ಅನುದಾನ ನೀಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆರೋಪಿಸಿದರು. ಆ ರಾಜ್ಯಗಳಿಗೆ ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದ್ದು, ಕರ್ನಾಟಕದ ಮೇಲೆ ಮಲತಾಯಿ ಧೋರಣೆ ಮುಂದುವರೆಸಲಾಗಿದೆ.ಒಟ್ಟಾರೆ ಕೇಂದ್ರ ಸರ್ಕಾರದ ಬಜೆಟ್ ನಿರಾಸೆ ತರಿಸಿದೆ. ನಿರೀಕ್ಷೆ ಹುಸಿಗೊಳಿಸಿದೆ. ಇಡೀ ಆರ್ಥಿಕತೆ ಕೃಷಿ ಕ್ಷೇತ್ರವನ್ನು ಅವಲಂಬಿಸಿದ್ದರೂ ಸಹ ಕೃಷಿಗೆ ಉತ್ತೇಜನ ನೀಡಿಲ್ಲ. ಕೃಷಿಕರ ಸಂಕಷ್ಟಗಳಿಗೆ ಸ್ಪಂದಿಸದೇ ಮೂಗಿಗೆ ತುಪ್ಪ ಸವರಲಾಗಿದೆ. ಅನಾವೃಷ್ಟಿಯಿಂದ ರಾಜ್ಯದ ರೈತರು ತೊಂದರೆಗೆ ಸಿಲುಕಿದ್ದರೂ ಸ್ಪಂದಿಸಿಲ್ಲ. ರಾಜ್ಯದ ನೀರಾವರಿ ಯೋಜನೆಗಳಿಗೂ ಅನುದಾನ ನೀಡಿಲ್ಲ.ಮಹಿಳಾ ಸಬಲೀಕರಣಕ್ಕೂ ಕಾಳಜಿ ವಹಿಸಿಲ್ಲ. ಆರ್ಥಿಕತೆಗೆ ಉತ್ತೇಜನ ನೀಡಿಲ್ಲ.ಹೂರಣ ಇಲ್ಲದ ಹೋಳಿಗೆಯಂತಿರುವಕೇಂದ್ರದ ಬಜೆಟ್ ನಂಬಿಕೆ ಹುಸಿಗೊಳಿಸಿದೆ ಎಂದು ದೂರಿದರು.