
ಬೆಂಗಳೂರು : ಕರ್ನಾಟಕ ರಾಜ್ಯ ಸಂಜೀವಿನಿ ಒಕ್ಕೂಟದಲ್ಲಿ ಕೆಲಸ ಮಾಡುವ ಎಂ ಬಿ ಕೆ, ಎಲ್ ಸಿ ಆರ್ ಪಿ, ಪಶುಸಕಿ, ಕೃಷಿಸಕಿ, ಬ್ಯಾಂಕ್ ಸಕಿ ಹಾಗೂ ಇತರೆ ನೌಕರರಿಗೆ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ ಹಾಗೂ ಉಪಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಂಗಳೂರಿನ ವಿಧಾನಸಭೆಯಲ್ಲಿ AITUC ಸಂಯೋಜಿತ ಕರ್ನಾಟಕ ರಾಜ್ಯ ಸಂಜೀವಿನಿ ಒಕ್ಕೂಟದ ನೌಕರರ ಮತ್ತು ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ಪೇಡರೇಷನ್ ನೇತೃತ್ವದಲ್ಲಿ ಮನವಿ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.

ಸಂಘಟನೆಯ ರಾಜ್ಯ ಮುಖಂಡ ಹೊನ್ನಪ್ಪ ಮರೆಮ್ಮನವರ ಸಚಿವರಿಗೆ ಬೆಳಗಾವಿ ಅಧಿವೇಶನದ ಸಮಯದಲ್ಲಿ ವೇತನ ಹೆಚ್ಚಳ ಇತರೆ ಬೇಡಿಕೆಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಅಂದು ನೀಡಿದ ಭರವಸೆಯನ್ನು ಇಲ್ಲಿಯವರೆಗೂ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ ಮನವರಿಕೆ ಮಾಡಿಕೊಟ್ಟರು. ಆಗ ಸಚಿವರು ಕೂಡಲೇ ಇಲಾಖೆಯ ಇಲಾಖೆಯ ಪ್ರಧಾನಕಾರ್ಯದರ್ಶಿ ಅವರಿಗೆ ಫೋನ್ ಮೂಲಕ ಮಾತನಾಡಿ ಇಂದೆ ಕಡತವನ್ನು ನನ್ನ ಬಳಿಗೆ ತನ್ನಿರಿ ಅಂತಾ ಸೂಚನೆ ನೀಡಿದರು. ಬಳಿಕ ಮನವಿ ಸಲ್ಲಿಸಲು ತೆರಳಿದ ನಿಯೋಗಕ್ಕೆ ಆದಷ್ಟು ಬೇಗ ಅಗತ್ಯ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.
ಈ ಸಮಯದಲ್ಲಿ ರುದ್ರಮ್ಮ, ಅಕ್ಕಮ್ಮಾ, ಸುಮಾ,ರಾಧಾ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ ಎಂಬಿಕೆ,ಎಲ್ ಸಿ ಆರ್ ಪಿಗಳು ಹಾಜರಿದ್ದರು.