
ಬ್ಯಾಡಗಿ: ಬಸ್ ನಿಲ್ದಾಣ ಇಲ್ಲದ ಊರಿನಲ್ಲಿ ನಿತ್ಯ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.ನಿತ್ಯ ಶಾಲೆ-ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳು ಅವರಿವರ ಮನೆ ಮುಂದೆ ಪಂಚಾಯುತಿ ಕಪೌಂಡ್ ಮುಂದೆ ಟೀ ಅಂಗಡಿ,ಬೀಡಾ ಅಂಗಡಿ ಮುಂದೆ ನಿಲ್ಲುವಂತ ಪರಿಸ್ಥಿತಿಯಿದೆ.ಹೌದು ಈ ರೀತಿ ಪರಿಸ್ಥಿತಿ ಇರುವುದು ಬೇರೆ ಯಾವ ಊರಿನಲ್ಲಿ ಇಲ್ಲ.

ಜಿಲ್ಲೆಯ ಬ್ಯಾಡಗಿ ತಾಲೂಕು ಕಲ್ಲೇದೇವರ ಗ್ರಾಮದಲ್ಲಿ ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಜನರು ದಿನ ಕಳೆಯುತ್ತಿದ್ದಾರೆ. ಸಾವಿರಾರು ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮ. ಇದೇ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸಹ ಇದೆ.ಇದೇ ಗ್ರಾಮದಿಂದ ನಿತ್ಯ ಬ್ಯಾಡಗಿ,ರಾಣೆಬೇನ್ನೂರು ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡುತ್ತಾರೆ.ಮಳೆಗಾಲ ಬೇರೆ ಆರಂಭವಾಗಿದ್ದು ನಿತ್ಯ ಬೇರೆಯವರ ಮನೆಯ ಮುಂದೆ ಆಸರೆ ಪಡೆದು ಬಸ್ ಹತ್ತುವಂತ ಪರಿಸ್ಥಿತಿಯಿದೆ. ಇನ್ನ ಮೇಲಾದರು ಬಸ್ ನಿಲ್ದಾಣ ನಿರ್ಮಾಣ ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.