ಹಾವೇರಿ : ಹಾವೇರಿ ಶಹರ ಪೊಲೀಸರಿಂದ ಸಾರ್ವಜನಿಕರಿಗೆ ಸಂಚಾರಿ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಲಾಯಿತು.
ಇಲ್ಲಿನ 9.ನೇ ವಾರ್ಡ್ ಒಳಪಡುವ ಶಿವಾಜಿನಗರದಲ್ಲಿ ಪೊಲೀಸ್‌ಗಳಿಂದ ಸಾರ್ವಜನಿಕರಿಗೆ ಹೆಲ್ಮೆಟ್ ಕಡ್ಡಾಯವಾಗಿ ಬಳಸುವಂತೆ,ಬೈಕ್ ಅಥವಾ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಿದಂತೆ, ಸಿಗ್ನಲ್ ಜಂಪ, ಮತ್ತು 18 ವರ್ಷ ಮೇಲ್ಪಟ್ಟ ಹುಡಗ ಅಥವಾ ಹುಡುಗಿಯರಿಗೆ ಲೈಸೆನ್ಸ್ ಮಾಡಿಸುವಂತೆ ಜನರಿಗೆ ಮಾಹಿತಿ ನೀಡಿದರು.ಅವಸರದಲ್ಲಿ ಗಾಡಿಗಳನ್ನು ಚಲಾವಣೆ ಮಾಡಬೇಡಿ. ಹೋಗುವಾಗ ಎರಡು ನಿಮಿಷದ ಬೇಗ ಹೊರಡಿ, ಚಿಕ್ಕ ಮಕ್ಕಳ ಕೈಯಲ್ಲಿ ಗಾಡಿಗಳನ್ನು ಕೊಡಬೇಡಿ. ಮನೆಯಲ್ಲಿ ಆಚೆ ಬರುವಾಗ ರಸ್ತೆಯಲ್ಲಿ ವಾಹನಗಳನ್ನು ನೋಡಿ ಬನ್ನಿ ಎಂದು ತಿಳಿಸಿದರು.ಪೊಲೀಸ್‌ರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಪೊಲೀಸರ ಈ ಕಾರ್ಯಕ್ಕೆ ವಾರ್ಡಿನ ಸದಸ್ಯೆ ಚೆನ್ನಮ್ಮ ಬ್ಯಾಡಗಿ ಕೃತಜ್ಞತೆ ಸಲ್ಲಿಸಿದ್ದಾರೆ.