

ಹಾನಗಲ್: ಪಟ್ಟಣದಲ್ಲಿರುವ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಜೆಡಿಎಸ್ ತಾಲೂಕ ಘಟಕದ ಅಧ್ಯಕ್ಷ ರಾಮನಗೌಡ ಬಸನಗೌಡ ಪಾಟೀಲ್ ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಿದ ಅವರು, ಪಟ್ಟಣದಲ್ಲಿ ಮುಖ್ಯ ರಸ್ತೆಯಲ್ಲಿ ತಾಲೂಕ ಕಚೇರಿ,ಪೊಲೀಸ್ ಸ್ಟೇಷನ್, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಆಫೀಸ್, ಪಿಡಬ್ಲ್ಯೂಡಿ, ಸಿಡಿಪಿಓ ಕಚೇರಿಗಳಿವೆ. ಇದೇ ರಸ್ತೆಯಲ್ಲಿ ನಿತ್ಯ ಈ ಎಲ್ಲ ಅಧಿಕಾರಿಗಳು ಓಡಾಡುತ್ತಾರೆ. ಈ ರಸ್ತೆ ಹದಗೆಟ್ಟಿರುವ ಬಗ್ಗೆ ಯಾವ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ.
ಹೀಗಾಗಿ ಇಂದು ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ವತಿಯಿಂದ ಹಾಗೂ ಈ ರೋಡಿನ ಅಕ್ಕ ಪಕ್ಕ ಇರ್ತಕ್ಕಂತ ವ್ಯಾಪಾರಸ್ಥರನ್ನು ಒಳಗೊಂಡು ಇಂದು ಈ ರಸ್ತೆಯ ದುಸ್ಥಿತಿಯನ್ನು ಸರ್ಕಾರದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.