ಹಿರೇಕೆರೂರು: ತಾಲೂಕಿನ ತಿಪ್ಪಾಯಿಕೊಪ್ಪದ ಜನರಿಗೆ ಅನುಕೂಲಕ್ಕೆ ನ್ಯಾಷನಲ್ ಹೈವೇ ಅಥಾರಿಟಿಯಿಂದ 25 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ಸೇತುವೆಯನ್ನು ಮಾಜಿ ಸಚಿವ ಬಿ.ಸಿ.ಪಾಟೀಲ ವೀಕ್ಷಣೆ ಮಾಡಿದರು.
ಇದೇ ವೇಳೆ ತಮ್ಮ ಅವಧಿಯಲ್ಲಿ ತಾಲೂಕಿನ ಕ್ಷೇತ್ರದ ಜನರಿಗೆ ಅನುಕೂಲ ಆಗುವಂತ ಕಾರ್ಯಗಳನ್ನು ಮಾಡಿರುವುದಕ್ಕೆ ಸಂತಸಗೊಂಡ ಕೌರವ ಈ ಕಾರ್ಯಕ್ರಮ ಅನುಷ್ಠಾನಕ್ಕೆ ಸಹಕಾರ ನೀಡಿದ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರರವರ ಅವರನ್ನು ಸ್ಮರಿಸಿಕೊಂಡರು.
ಸೇತುವೆ ಇಲ್ಲದೇ ತಿಪ್ಪಾಯಿಕೊಪ್ಪ ಜನರಿಗೆ ಹಾಗೂ ವಾಹನ ಸವಾರರಿಗೆ ತುಂಬಾ ಸಮಸ್ಯೆ ಎದುರಿಸುತ್ತಿದ್ದರು. ಈಗ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆ ಲಭಿಸಿದ್ದಕ್ಕೆ ಜನರು ಮಾಜಿ ಸಚಿವ ಬಿ.ಸಿ.ಪಾಟೀಲರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲಿಂಗನಗೌಡ ಹಳ್ಳಪ್ಪ ಗೌಡ, ಪ್ರಶಾಂತ್ ಹಳ್ಳಪ್ಪ ಗೌಡ್ರು ಹನುಮಂತಪ್ಪ ಗಿರಿಯಣ್ಣನವರ, ಸೋಮಣ್ಣ ಮಡಿವಾಳರ,ಗಿರೀಶ್ ಪಾಟೀಲ್,ರಾಮು ತೋಳ್ನವರ, ನಾಗರಾಜ್ ಹಿರೇಮಠ, ವಾಗೀಶ್ ಹಿರೇಮಠ್ ಹಾಜರಿದ್ದರು.