CrimeINTERNATIONAL

ಹೌತಿ ಬಂಡುಕೋರರಿಂದ ಭಾರತ ಮೂಲದ ಹಡಗು ಅಪಹರಣ: ಇಸ್ರೇಲ್

ಇಸ್ತಾಂಬುಲ್: ಟರ್ಕಿಯಿಂದ ಭಾರತಕ್ಕೆ ಹೊರಟಿದ್ದ ಸರಕು ಸಾಗಣೆ ಹಡಗನ್ನು ಯೆಮೆನ್‌ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಅಪಹರಿಸಿದ್ದಾರೆ ಎಂದು ಇಸ್ರೇಲ್ ಮಾಹಿತಿ ನೀಡಿದೆ.

ಟರ್ಕಿಯಿಂದ ಭಾರತಕ್ಕೆ ಹೊರಟಿದ್ದ ಸರಕು ಸಾಗಣೆ ಹಡಗನ್ನು ಯೆಮೆನ್‌ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಅಪಹರಿಸಿದ್ದು, ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದಾರೆ. ಇಸ್ರೇಲ್‌ ಹಡಗನ್ನು ಹೈಜಾಕ್ ಮಾಡಿರುವುದಾಗಿ ಹೌತಿಗಳು ಹೇಳಿದ್ದರು. ಆದರೆ ಹೌತಿಗಳ ಹೇಳಿಕೆಯನ್ನು ನಿರಾಕರಿಸಿರುವ ಇಸ್ರೇಲ್ ಸರ್ಕಾರ, ಅಪಹರಣಕ್ಕೊಳಗಾದ ಗ್ಯಾಲಕ್ಸಿ ಲೀಡರ್ ಹಡಗಿನಲ್ಲಿ ಯಾವುದೇ ಭಾರತೀಯರು ಇಲ್ಲ. ಅಲ್ಲದೆ ಅದು ಇಸ್ರೇಲ್ ನ ಹಡಗಲ್ಲ ಎಂದು ಸ್ಪಷ್ಟಪಡಿಸಿದೆ.

ಹೌತಿಗಳು ಅಪಹರಿಸಿರುವ ಹಡಗು ಇಸ್ರೇಲ್‌ಗೆ ಸೇರಿದ್ದಲ್ಲ. ಬ್ರಿಟಿಷ್ ಕಂಪನಿಯ ಒಡೆತನದ ಮತ್ತು ಜಪಾನ್ ಸಂಸ್ಥೆಯ ನಿರ್ವಹಣೆ ಮಾಡುತ್ತಿರುವ ಹಡಗನ್ನು ಯೆಮೆನ್ ಹೌತಿ ಬಂಡುಕೋರರು ಇರಾನ್ ಮಾರ್ಗದರ್ಶನದಲ್ಲಿ ಅಪಹರಿಸಿದ್ದಾರೆ. ಇರಾನ್ ಮುಂದೆ ನಿಂತು ಅಂತಾರಾಷ್ಟ್ರೀಯ ಹಡಗು ಅಪರಹರಣಕ್ಕೆ ಸಹಕರಿಸಿರುವುದು ಖಂಡನಾರ್ಹವಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಾರ್ಯಾಲಯವು ಟ್ವೀಟ್ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial