ದೀಪಾವಳಿಯನ್ನು ಆಚರಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ!
ಕೆನಡಾ: ಭಾರತ ಹಾಗೂ ಕೆನಡಾ ಮಧ್ಯೆ ಇರೊ ಬಿಕ್ಕಟ್ಟಿನ ನಡುವೆಯೇ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ದೀಪಾವಳಿಯನ್ನ ಆಚರಿಸಿದ್ದಾರೆ. ಒಟ್ಟಾವಾದಲ್ಲಿರೊ ಪಾರ್ಲಿಯಾಮೆಂಟ್ ಹಿಲ್‌ನಲ್ಲಿ ಭಾರತೀಯ ಸಮುದಾಯದವ್ರ ಜೊತೆಗೂಡಿ, ಬೆಳಕಿನ ಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ. ಈ ಬಗ್ಗೆ Xನಲ್ಲಿ ಪೋಸ್ಟ್ ಹಾಕಿರೊ ಟ್ರುಡೊ, ಇನ್ನು ಕೆಲವೇ ದಿನಗಳಲ್ಲಿ ದೇಶದಾದ್ಯಂತ ಹಾಗೂ ಜಗತ್ತಿನಾದ್ಯಂತ ದೀಪಾವಳಿ ಹಾಗೂ ಬಂದಿ ಚೋರ್ ದಿನವನ್ನ ಆಚರಿಸಲಾಗುತ್ತೆ. ಎರಡು ಆಚರಣೆಗಳು ಕತ್ತಲೆಯ ವಿರುದ್ಧದ ಬೆಳಕಿನ ವಿಜಯದ ಸಂಕೇತವಾಗಿವೆ. ಎಲ್ಲರಿಗೂ ಹ್ಯಾಪಿ ದೀಪಾವಳಿ, ಹ್ಯಾಪಿ ಬಂದಿ ಚೋರ್ ದಿವಸ್ ಅಂತ ವಿಶ್ ಮಾಡಿದ್ದಾರೆ. ಅಂದ್ಹಾಗೆ ಈ ಆಚರಣೆಯನ್ನ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರಶೇಖರ್ ಆರ್ಯ ಆಯೋಜನೆ ಮಾಡಿದ್ರು. ಇನ್ನೊಂದ್ ಕಡೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಲಂಡನ್‌ನಲ್ಲಿ ದೀಪಾವಳಿ ಹಬ್ಬವನ್ನ ದೀಪ ಬೆಳಗಿಸಿ ಆಚರಿಸಿದ್ದಾರೆ. ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವ್ರ ಜೊತೆಗೂಡಿ ರಿಷಿ ಸುನಕ್ ಬೆಳಕಿನ ಹಬ್ಬವನ್ನ ಲಂಡನ್‌ನ ಡೌನಿಂಗ್ ಸ್ಟ್ರೀಟ್‌ನಲ್ಲಿ ಅಚರಿಸಿದ್ದಾರೆ ಅಂತ ಬ್ರಿಟನ್ ಪ್ರಧಾನಿ ಕಛೇರಿ ಹೇಳಿದೆ.