
ಹಾನಗಲ್: ತಾಲೂಕಿನ ಆಡೂರ ಗ್ರಾಮದಲ್ಲಿ ಟ್ರ್ಯಾಕ್ಟರ್ ಇಂಜಿನ್ ಮತ್ತು ಟ್ರೆಲರ್ ನಡುವೆ ಸಿಲುಕಿ ವ್ಯಕ್ತಿಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಬಂಕಾಪೂರ ಗ್ರಾಮದ ಯಲ್ಲಪ್ಪ ಉಳಿವೆಪ್ಪ ವಳಗೇರಿ ೪೦ ಮೃತ ದುರ್ದೈವಿಯಾಗಿದ್ದಾನೆ.
ಬಂಕಾಪೂರ ಗ್ರಾಮದಿಂದ ಆಡೂರ ಗ್ರಾಮಕ್ಕೆ ಟ್ರ್ಯಾಕ್ಟರ್ ನಲ್ಲಿ ಎಂ.ಸ್ಯಾಂಡ್ ಉಸುಕು ತಂದಿದ್ದ ವ್ಯಕ್ತಿ ಗ್ರಾಮದಲ್ಲಿರುವ ಗುಡ್ಡವನ್ನ ಹತ್ತಿಸುವ ವೇಳೆ ಏಕಾಏಕಿ ಟ್ರ್ಯಾಕ್ಟರ್ ಇಂಜಿನ್ ಮೆಲಕ್ಕೆ ಹಾರಿದ ಪರಿಣಾಮ ಇಂಜಿನ್ ಮತ್ತು ಟ್ರೆಲರ್ ನಡುವೆ ಸಿಲುಕಿ ಮೃತಪಟ್ಟಿದ್ದಾನೆ.ಸ್ಥಳೀಯರ ಸಹಾಯದಿಂದ ಹೊರ ತೆಗೆಯಲಾಗಿದೆ.ಆಡೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.