
ಹಾವೇರಿ: ಕರ್ನಾಟಕ ವಿಧಾನಸಭೆ ಜುಲೈ 25, 2024 ರಂದು ರಾಷ್ಟೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ(ನೀಟ್) ರದ್ದುಗೊಳಿಸುವ ಮತ್ತು ರಾಜ್ಯವನ್ನು ಈ ಪರೀಕ್ಷೆಯಿಂದ ವಿನಾಯತಿ ನೀಡಲು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದ್ದು, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ಬೆಂಬಲಿಸುತ್ತದೆ.
ಈ ನಿರ್ಣಯವು ಸಾಮಾನ್ಯ ಜನರ ಇಚ್ಚೆಯನ್ನು ಪ್ರತಿನಿಧಿಸುತ್ತದೆ ಮತ್ತು ಕರ್ನಾಟಕದ ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿದ ಶೈಕ್ಷಣಿಕ ಸಮಸ್ಯೆಗಳು ಮತ್ತು ಸವಾಲುಗಳನ್ನು ಗುರುತಿಸುತ್ತದೆ. ನೀಟ್ ಪರೀಕ್ಷೆಯಿಂದಾಗಿ ಗ್ರಾಮೀಣ ಬಡ
ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣಾವಕಾಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿತ್ತು. ಶಾಲಾ ಶಿಕ್ಷಣ ವ್ಯೆವಸ್ಥೆಯನ್ನು ನಿರರ್ಥಕಗೊಳಿಸಿ ರಾಜ್ಯದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ನೀಡುವ ರಾಜ್ಯ ಸರ್ಕಾರವನ್ನು ನಿರಾಕರಣೆ ಮಾಡಲಾಗಿತ್ತು.
ರಾಷ್ರೀಯ ಪರೀಕ್ಷಾ ಪ್ರಾಧಿಕಾರ (NTA) ನಡೆಸುವ ನೀಟ್ ನೆಟ್ ಸೇರಿದಂತೆ ರಾಷ್ಟೀಯ ಮಟ್ಟದ ಪರೀಕ್ಷೆಗಳನ್ಮು ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಮಾತ್ರವಲ್ಲದೆ ನೀಟ್ ಪರೀಕ್ಷೆಯು ಸಿಬಿಎಸ್ಸಿ ಪಠ್ಯಕ್ರಮಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತದೆ ಇದರಿಂದ ರಾಜ್ಯ ಪಠ್ಯಕ್ರಮ ಅಧ್ಯಯನ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಮದ್ಯ ಶೈಕ್ಷಣಿಕ ಅಸಮತೋಲನವನ್ನು ಉಂಟುಮಾಡಿರುತ್ತದೆ. ನೀಟ್ ತರಬೇತಿ ಕೇಂದ್ರಗಳು ರಾಜ್ಯದಲ್ಲಿ ಪೋಷಕರನ್ನು ಸುಲಿಗೆ ಮಾಡುವ ಕೇಂದ್ರಗಳಾಗಿದ್ದು ಬಡ ಹಾಗೂ ಮಾಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಲಭಿಸುವುದು ಕನಸಾಗಿತ್ತು ಬಹುಮುಖ್ಯವಾಗಿ ರಾಜ್ಯ ಸರ್ಕಾರದ ಮೆಡಿಕಲ್ ಕಾಲೇಜುಗಳಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಸೀಟು ಲಭ್ಯವಾಗದೇ ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದೇ ಹಲವು ವರ್ಷಗಳಿಂದ ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.
ಮೇಲಿನ ಎಲ್ಲಾ ಸಮಸ್ಯೆಗಳನ್ನು ಅರಿತು ನೀಟ್ ವಿರುದ್ದ ಎಸ್.ಎಫ್.ಐ ಸೇರಿದಂತೆ ಪ್ರಜಾಸತ್ತಾತ್ಮಕ ಹಾಗೂ ಎಡ ವಿದ್ಯಾರ್ಥಿ ಸಂಘಟನೆಗಳು ಮತ್ತು ಪೋಷಕರ ಸಂಘಟನೆಗಳು ನಿರಂತರವಾಗಿ ನೀಟ್ ವಿರುದ್ಧ ಅಭಿಯಾನ ಹಾಗೂ ಹೋರಾಟಗಳನ್ನು ಮಾಡುತ್ತಾ ಸರ್ಕಾರದ ಗಮನವನ್ನು ಸೆಳೆಯಲು ಸಾಧ್ಯವಾಗಿತ್ತು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜುಲೈ 25, 2024 ರಂದು ನಡೆದ ವಿಧಾನಸಭಾ ಕಲಾಪದಲ್ಲಿ ರಾಷ್ಟೀಯ ಪ್ರವೇಶ ಅರ್ಹತಾ ಪರೀಕ್ಷೆ (ನೀಟ್) ರದ್ದುಪಡಿಸಲು ಮತ್ತು ರಾಜ್ಯಕ್ಕೆ ಪರೀಕ್ಷೆಯಿಂದ ವಿನಾಯತಿ ನೀಡುವಂತೆ ಒತ್ತಾಯಿಸಿ ತೆಗೆದುಕೊಂಡ ನಿರ್ಣಯವನ್ನು ರಾಜ್ಯದ ವಿದ್ಯಾರ್ಥಿ ಸಮುದಾಯದ ಪರವಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ಸ್ವಾಗತಿಸುತ್ತದೆ ಎಂದು ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್, ಮುಖಂಡರಾದ ನೇಹಾಲ್ ಖಾನ್ ಗಂಗಾವತಿ, ಗೌತಮ್ ಸಾವಕ್ಕನವರ, ದುರುಗಪ್ಪ ಯಮ್ಮಿಯವರ, ಅರ್ಜುನ ರಾಜಪೂತ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.