ಹಾವೇರಿ: ಶಿಗ್ಗಾವಿ ವಿಧಾನಸಭೆ ಉಪಚುನಾವಣೆ ಹಿನ್ನೆಲೆ ಬಿಜೆಪಿಯಿಂದ 60 ಕ್ಕೂ ಹೆಚ್ಚು ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ದಿನದಿಂದ ದಿನಕ್ಕೆ ರಂಗೇರಿದ ಚುನಾವಣೆ ಹಿನ್ನೆಲೆ ಇಂದು ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಸಂಘಟನಾ ಸಭೆ ನಡೆಸಲು ಆಗಮಿಸಿದ ವೇಳೆ ಆಕಾಂಕ್ಷಿಗಳ ದಂಡು ಅರ್ಜಿ ಸಲ್ಲಿಕೆ ಮಾಡಿದೆ. ಸಂಸದ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಟಿಕೆಟ್ ಗಾಗಿ 60 ಕ್ಕೂ ಹೆಚ್ಚು ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ ಮಾಡಿದರು. ಬಿಜೆಪಿ ವೀಕ್ಷಕರಾಗಿ ಆಗಮಿಸಿದ ರಾಧಾ ಮೋಹನದಾಸ ಅಗರವಾಲ್,
ಮಾಜಿ ಸಚಿವ ಬಿಸಿ ಪಾಟೀಲ, ಶಾಸಕ ಮಹೇಶ ತೆಂಗಿನಕಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಗೆ ಟಿಕೆಟ್ ಆಕಾಂಕ್ಷಿಗಳು ಮನವಿ ಸಲ್ಲಿಸಿದರು.
ಶ್ರೀಕಾಂತ್ ದುಂಡಿಗೌಡರ, ಭರತ ಬೊಮ್ಮಾಯಿ,ಶಶಿಧರ ಯಲಿಗಾರ,ಶೋಭಾ ನಿಸ್ಸೀಮಗೌಡರ,
ಸೇರಿದಂತೆ 60 ಕ್ಕು ಹೆಚ್ಚು ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ ಮಾಡಿದರು.ಇನ್ನೂ
ಅರ್ಜಿ ಸಲ್ಲಿಕೆಗೆ ಸಂಸದ ಬೊಮ್ಮಾಯಿ ಪುತ್ರ ಭರತ ಬೊಮ್ಮಾಯಿ ಆಗಮಿಸದ ಹಿನ್ನೆಲೆ
ಭರತ ಬೊಮ್ಮಾಯಿ ಪರ ಬೆಂಬಲಿಗರಿಂದ ಅರ್ಜಿ ಸಲ್ಲಿಕೆ ಮಾಡಿದರು.