DistrictHaveriLatest

ಕಾಲುವೆಗೆ ಬಿದ್ದು ಬಸ್, 13 ಜನರಿಗೆ ಗಾಯ

ರಾಣೆಬೇನ್ನೂರು: ಚಲಿಸುತ್ತಿದ್ದ ಸಾರಿಗೆ ಬಸ್ ಕಾಲುವೆಗೆ ಬಿದ್ದ ಪರಿಣಾಮ 13 ಜನ ಗಾಯಗೊಂಡಿರುವ ಘಟನೆ ರಾಣೇಬೆನ್ನೂರ ತಾಲೂಕಿನ ಹಲಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಹಾರಗೊಪ್ಪ ಬಳಿ ಈ ಘಟನೆ ನಡೆದಿದ್ದು,ಶಿಕಾರಿಪುರದಿಂದ ರಾಣೇಬೆನ್ನೂರಿಗೆ ಬರುತ್ತಿದ್ದ ಸಾರಿಗೆ ಇಲಾಖೆ ಬಸ್‌ನ ಎಕ್ಸೇಲ್ ಕಟ್ ಆಗಿ ಯುಟಿಪಿ ನೀರಾವರಿ ಕಾಲುವೆಗೆ ಬಿದ್ದಿದೆ.
ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಹಲಗೇರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial