
ಹಾವೇರಿ: ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಮಿನಿ ಸಿಲಿಂಡರ್‌ನಲ್ಲಿ ಏಕಾಏಕಿ ಆಕ್ಸಿಜನ್ ಸೋರಿಕೆಯಾಗಿ ಆಸ್ಪತ್ರೆಯಲ್ಲಿನ ಒಳರೋಗಿಗಳ ಏಕಾಏಕಿ ಆಸ್ಪತ್ರೆಯಿಂದ ಹೊರ ಓಡಿ ಬಂದ ಘಟನೆ ನಡೆದಿದೆ.

ಬುಧವಾರ ಬೆಳಿಗ್ಗೆ ಆಸ್ಪತ್ರೆಯ ಕ್ಯಾಜ್ವಲಿಟಿ ವಿಭಾಗದಲ್ಲಿದ್ದ ಮಿನಿ ಆಕ್ಸಿಜನ್ ಸಿಲಿಂಡರ್ ನಲ್ಲಿ ಆಕ್ಸಿಜನ್ ಸೋರಿಕೆಯಾಗಿದೆ. ಸೋರಿಕೆಯಾದಾಗ ದೊಡ್ಡ ಪ್ರಮಾಣದಲ್ಲಿ ಶಬ್ಧ ಉಂಟಾದ ಹಿನ್ನಲೆ ಜನರು ಭಯಗೊಂಡು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ.

ಕ್ಯಾಜ್ವಲಿಟಿ ವಿಭಾಗದಲ್ಲಿ ಘಟನೆಯಾಗಿದೆ,ಆದರೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 300ಕ್ಕೂ ಹೆಚ್ಚು ರೋಗಿಗಳು, ಒಳರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು, ಗರ್ಭಿಣಿ ತಾಯಂದಿರು, ಹಸಗೂಸು ಎತ್ತಿಕೊಂಡು ಜೀವ ಭಯದಲ್ಲಿ ಹೊರಗೆ ಓಡಿ ಬಂದಿದ್ದಾರೆ.ಘಟನೆಯಿಂದ ಕೆಲ ಸಮಯ ಜಿಲ್ಲಾಸ್ಪತ್ರೆಯ ಎದುರಿನ ರಸ್ತೆ, ರೋಗಿಗಳು ಹಾಗೂ ಸಂಬಂಧಿಕರಿಂದ ತುಂಬಿತ್ತು.

ಘಟನೆ ಸಿಕ್ಕದಾಗಿದ್ದರೂ, ಒಬ್ವರಿಂದ ಒಬ್ಬರಿಗೆ ವಿಷಯ ಹರಡಿ, ಎಲ್ಲ ರೋಗಿಗಳು ಹೊರಗಡೆ ಬಂದು ನಿಂತುಕೊಂಡರು.ಇನ್ನೂ ಕೆಲ ರೋಗಿಗಳು ಕೈಗೆ ಹಾಕಿರುವ ಡ್ರಿಪ್ ಸಮೇತವಾಗಿ ಹೊರಗಡೆ ಓಡಿ ಬಂದರು.ಬಳಿಕ ಆಸ್ಪತ್ರೆಯ ವೈದ್ಯರು, ಜನರಲ್ಲಿನ ರೋಗಿಗಳಲ್ಲಿ,ಗರ್ಭಿಣಿ ಮಹಿಳೆಯರಲ್ಲಿ ಮೂಡಿದ ಆತಂಕವನ್ನು ದೂರ ಮಾಡಿ ವಾರ್ಡಿಗೆ ಸೇರಿಸಿದರು.