DistrictHaveriLatestNewsState

ನಮ್ಮ ದೇಶದ ಆರ್ಥಿಕತೆ ಉಳಿದಿರುವುದು ನಮ್ಮ ತಾಯಂದಿರಿಂದ :ಬಸವರಾಜ ಬೊಮ್ಮಾಯಿ

ಹಾವೇರಿ: ನಮ್ಮ ದೇಶದ ಆರ್ಥಿಕತೆ ಉಳಿದಿರುವುದು ನಮ್ಮ ತಾಯಂದಿರಿಂದ, ನಮ್ಮ ದೇಶದಲ್ಲಿ ಉಳಿತಾಯ ಸಂಸ್ಕೃತಿ ಇದೆ. ಪಾಶ್ಚಿಮಾತ್ಯರದ್ದು ಖರ್ಚಿನ ಸಂಸ್ಕೃತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ಹಿರೆಕೆರೂರು ತಾಲೂಕಿನ ಚಿಕ್ಕೆರೂರು ಗ್ರಾಮದಲ್ಲಿ ಆರ್ಯ ವೈಶ್ಯ ಮಂಡಳಿ ಹಾಗೂ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ, ಶ್ರೀ ಮೈಲಾರಲಿಂಗೇಶ್ವರ, ಶ್ರೀ ಲಕ್ಷ್ಮೀ ನಾರಾಯಣ, ಶ್ರೀ ಸುಬ್ರಮಣ್ಯ, ಶ್ರೀ ಗಣಪತಿ ದೇವರುಗಳ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಶ್ರೀ ವಾಸವಿ ಸಮುದಾಯ ಭವನ ಮತ್ತು ಪ್ರಸಾದ ನಿಲಯ ಉದ್ಘಾಟನೆ ಮಾಡಿ ಮಾತನಾಡಿದರು.

ಆರ್ಯ ವೈಶ್ಯ ಸಮಾಜ ಬಹಳ ವೈಶಿಷ್ಟ್ಯಪೂರ್ಣ ಗುಣಧರ್ಮ ಇರುವ ಸಮಾಜ ಇದೆ. ಹಣಕಾಸಿನ ನಿಯಂತ್ರಣ ನಿಮ್ಮ ಕೈಯಲ್ಲಿದೆ. ಲಕ್ಷ್ಮೀ ನಿಮಗೆ ಒಲಿದಿದ್ದಾಳೆ. ಲಕ್ಷ್ಮೀ ಪುತ್ರರು ನೀವು. ಇಡೀ ಜಗತ್ತಿಗೆ ಅಂಕಿ ಸಂಖ್ಯೆಯ ಜೊತೆಗೆ ಲೆಕ್ಕಾಚಾರ, ಗಣಿತ ಕಲಿಸಿರುವುದು ನಿಮ್ಮ ಸಮಾಜ. ಸೊನ್ನೆ ಕಂಡು ಹಿಡಿದಿರುವ ಆರ್ಯಭಟ ನಿಮ್ಮ ಸಮಾಜದ ಮುಖ್ಯಸ್ಥರು ಅವರು ಸಂಖ್ಯಾ ಬಲ ಮುಖ್ಯವಲ್ಲ. ಬುದ್ದಿ ಬಲ ಮುಖ್ಯ. ನಿಮ್ಮ ಜ್ಞಾನ ಮತ್ತು ಭಕ್ತಿಯಿಂದ ನೀವು ಎಲ್ಲೇ ಇದರೂ ಯಶಸ್ವಿಯಾಗುತ್ತೀರಿ, ನಿಮ್ಮ ಕೈ ಯಾವಾಗಲೂ ಭೂಮಿಯ ಕಡೆಗೆ ನೋಡುತ್ತದೆ. ಯಾವತ್ತೂ ಆಕಾಶದ ಕಡೆಗೆ ನೋಡುವುದಿಲ್ಲ. ಇದ್ದ ಹಣಕಾಸಿನ ಸ್ಥಿತಿಯಲ್ಲಿ ಹೆಂಗೆ ಬದುಕು ಮಾಡಬೇಕು ವ್ಯಾಪಾರ ಮಾಡಬೇಕು ಎನ್ನುವುದನ್ನು ನಿಮ್ಮಿಂದ ನೋಡಿ ಕಲಿಯಬೇಕು. ಹೇಗೆ ಉಳಿತಾಯಮಾಡಿ ಬದುಕು ನಡೆಸಬೇಕು ಎನುವುದನ್ನು ನಿಮ್ಮಿಂದ ಕಲಿಯಬೇಕು ಎಂದು ಹೇಳಿದರು.

ಒಂದು ಸಾರಿ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಅಮೇರಿಕಾದಲ್ಲಿ ಬ್ಯಾಂಕ್‌ಗಳು ಹೆಚ್ಚಿನ ಪ್ರಮಾಣದಲ್ಲಿ ದಿವಾಳಿಯಾಗುತ್ತವೆ. ನಮ್ಮ ದೇಶದಲ್ಲಿ ಅಷ್ಟು ಪ್ರಮಾಣದಲ್ಲಿ ಆಗುವುದಿಲ್ಲ ಎನ್ನುವ ಚರ್ಚೆ ನಡೆಯುತ್ತಿತ್ತು. ನಮ್ಮ ದೇಶದ ಆರ್ಥಿಕತೆ ಉಳಿದಿರುವುದು ನಮ್ಮ ತಾಯಂದಿರಿಂದ. ನಮ್ಮ ದೇಶದಲ್ಲಿ ಉಳಿತಾಯ ಸಂಸ್ಕೃತಿ ಇದೆ. ಪಾಶ್ಚಿಮಾತ್ಯರದ್ದು ಖರ್ಚಿನ ಸಂಸ್ಕೃತಿ. ಅವರದು ಖರ್ಚಿನ ಆರ್ಥಿಕತೆ, ನಮ್ಮ ಉಳಿತಾಯದ ಆರ್ಥಿಕತೆ, ಪ್ರತಿಯೊಂದು ಹಣವನ್ನು ಹೆಣ್ಣುಮಕ್ಕಳು ಉಳಿಸುತ್ತಾರೆ. ಉಳಿತಾಯ ಮಾಡಿದ ಹಣ ಕಷ್ಟ ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎನ್ನುವ ಮನಸ್ಥಿತಿ ಮತ್ತು ಮಾನಸಿಕ ನೆಮ್ಮದಿ ತರುತ್ತದೆ ಎಂದರು.

ಶಿಸ್ತಿನ ಸಮಾಜ
ಇದು ಶಿಸ್ತು, ಆ ಶಿಸ್ತನ್ನು ಆರ್ಯ ವೈಶ್ಯ ನಿಗಮದ ಅಧ್ಯಕ್ಷರಾಗಿದ್ದ ಡಿ.ಎಸ್. ಅರುಣ್ ಅವರು ಆರ್ಯ ವೈಶ್ಯ. ನಿಗಮದಲ್ಲಿ ತೋರಿಸಿದ್ದರು. ನಾನು ಆರ್ಯ ವೈಶ್ಯ ನಿಗಮಕ್ಕೆ 10 ಕೋಟಿ ಹಣ ನೀಡಿದ್ದೆ, ಅದನ್ನು ಆನ್‌ಲೈನ್‌ನಲ್ಲಿಯೇ ಹಣ ನೀಡಿ, ಆನ್‌ಲೈನ್‌ನಲ್ಲಿಯೇ ವಾಪಸ್ ಪಡೆದು ಲಾಭ ತಂದುಕೊಟ್ಟವರು ಡಿ.ಎಸ್‌. ಅರುಣ್ ಅವರು, ಇದನ್ನು ಅಧಿಕಾರಿಗಳು ಸಹಿಸಿಕೊಳ್ಳಲಿಲ್ಲ. ಎಲ್ಲವೂ ಸರಿಯಾಗಿದ್ದರೆ ಅಧಿಕಾರಿಗಳಿಗೆ ಯಾವುದೇ ಲಾಭವಾಗುವುದಿಲ್ಲ. ಈ ಸಮಾಜ ಪ್ರಾಮಾಣಿಕವಾಗಿ ಕೆಲಸ ಮಾಡಿ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತದೆ. ನಿಮ್ಮ ಸಮಾಜ ಸಣ್ಣ ಸಮಾಜ ಇದ್ದರೂ ಬಹಳ ಒಕ್ಕಟ್ಟಿನಿಂದ ಇದ್ದೀರಿ, ಇತ್ತೀಚೆಗೆ ಈ ಸಮಾಜ ಉದ್ಯಮದಲ್ಲಿಯೂ ಬೆಳವಣಿಗೆಯಾಗುತ್ತಿದೆ ಎಂದು ಹೇಳಿದರು.

ಬಿ.ಸಿ. ಪಾಟೀಲರ ಕೊಡುಗೆ
ಹಿರೇಕೆರೂರು ತಾಲೂಕು ಬಹಳ ಫಲವತ್ತಾದ ತಾಲೂಕು. ಭೂಮಿಗೆ ನೀರು ಕೊಟ್ಟರೆ ಭೂತಾಯಿ ಫಲವತ್ತಾದ ಬೆಳೆ ಕೊಡುತ್ತಾಳೆ, ಬಿ.ಸಿ. ಪಾಟೀಲರು ಈ ಕ್ಷೇತ್ರಕ್ಕೆ ನೀರು ತರಬೇಕೆಂದು ಬಿ.ಸಿ. ಪಾಟೀಲರು ಕೆಲಸ ಮಾಡಿದ್ದಾರೆ. ಅವರಿಗೆ ಈ ಕ್ಷೇತ್ರದ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ಹಿರೆಕೇರೂರು ಅಭಿವೃದ್ಧಿಯಲ್ಲಿ ಬಿ.ಸಿ.ಪಾಟೀಲರ ಕೊಡುಗೆ ದೊಡ್ಡದು. ಹುರ್ಗಾದೇವಿ ಕೆರೆ ತುಂಬಿಸುವುದು, ಸರ್ವಜ್ಞ ವಿತ್ತ ನೀರಾವರಿ. ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.
ಹಿರೆಕೇರೂರು ತಾಲೂಕಿನ ಅಭಿವೃದ್ಧಿ ಭವಿಷ್ಯ ಬಿ.ಸಿ. ಪಾಟೀಲರ ಜೊತೆಗೆ ಜೋಡಿಸಿಕೊಂಡಿದೆ. ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗಬೇಕೆಂದರೆ ಅದರ ಹಿಂದಿರುವ ದೊಡ್ಡ ಶಕ್ತಿ ಬಿ.ಸಿ. ಪಾಟೀಲರು ಅವರಿಗೆ ನೀವು ಯಾವಾಗ ಶಕ್ತಿ ಕೊಡುತ್ತೀರಿ ಆಗ ಅಭಿವೃದ್ಧಿ ಹೆಚ್ಚಾಗುತ್ತದೆ. ನಾನು ಎಂಪಿ ಚುನಾವಣೆಯಲ್ಲಿ ನಿಂತಾಗ ನನಗೆ 18 ಸಾವಿರಕ್ಕೂ ಹೆಚ್ಚು ಅಂತರದ ಮತಗಳನ್ನು ನೀಡಿ ನನಗೆ ಆಶೀರ್ವದಿಸಿದ್ದೀರಿ, ನಾನೂ ಹಿರೆಕೇರೂರು ಅಭಿವೃದ್ಧಿಗೆ ಶ್ರಮಿಸುತ್ತೇವೆ. ಕನ್ನಿಕಾ ಪರಮೇಶ್ವರಿ ನಿಮ್ಮ ಎಲ್ಲ ಕಾರ್ಯಗಳಿಗೂ ಆಶಿರ್ವಾದ ಮಾಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ಬಿ.ಸಿ. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ, ಕನ್ನೀಕಾ ಪರಮೇಶ್ವರಿ ಟ್ರಸ್ಟ್ ಕಮೀಟಿಯ ಅಧ್ಯಕ್ಷರಾದ ಕೇಶವಮೂರ್ತಿ ಚನ್ನಗಿರಿ ಸೇರಿದಂತೆ ಸಮಾಜದ ಪ್ರಮುಖರು, ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial