DistrictGadagHaveriLatest

ನಾಳೆ ನಾಡಿದ್ದು ಲೋಕಸಭಾ ಕ್ಷೇತ್ರದಲ್ಲಿ ಸಂಸದ ಬೊಮ್ಮಾಯಿ ಪ್ರವಾಸ

ಹಾವೇರಿ: ಲೋಕಸಭಾ ಸದಸ್ಯರಾದ ಬಸವರಾಜ ಬೊಮ್ಮಾಯಿ ಜು. 27 ಹಾಗೂ 28 ರಂದು ಹಾವೇರಿ ಗದಗ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ನಡೆಸಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಜು. 27 ರಂದು ಬೆಳಿಗ್ಗೆ 6.ಗಂಟೆಗೆ
ಬೆಂಗಳೂರ ಬಿಡುವುದು ವಿಮಾನ ಮೂಲಕ
ಹುಬ್ಬಳ್ಳಿ ಆಗಮಿಸಿ 11 ಗಂಟೆಗೆ ನಗರದ ಹೊಸಮಠದಲ್ಲಿ ವಿಜಯ ವಾಯ್ಸ್ ಕನ್ನಡ ನ್ಯೂಸ್ ಮೀಡಿಯಾ ನೆಟ್ವರ್ಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಮಧ್ಯಾಹ್ನ 12 ಗಂಟೆಗೆ ಗುರುಭವನದಲ್ಲಿ ಹಾವೇರಿ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಂಘ ಏರ್ಪಡಿಸಿದ, ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.1.30 ಕ್ಕೆ ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟ ಏರ್ಪಡಿಸಿದ, ಅಂಗನವಾಡಿ, ಬಿಸಿಯೂಟ,ಮಹಿಳಾ ಸಂಘಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.ಸಂಜೆ 4. ಗಂಟೆಗೆ ಶಿಗ್ಗಾವಿ ಸಂಗನ ಬಸವ ಮಂಗಲ ಭವನದಲ್ಲಿ ನಿಜಸುಖಿ ಹಡಪದ ಅಪ್ಪಣ್ಣರವರ 890ನೇ ಜಯಂತ್ಯೋತ್ಸವ ಹಾಗೂ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5-30 ಗಂಟೆಗೆ
ಕಂಕಣವಾಡ ಕಾರ್ಯಕ್ರಮ ಕಾಯ್ದಿರಿಸಲಾಗಿದೆ.ಸಂಜೆ 6. ಗಂಟೆಗೆ
ಸವಣೂರ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.ಸಂಜೆ 6.30 ಕ್ಕೆ ಸವಣೂರ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕಾ ವಿತರಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಜು.28.ರಂದು ಕಳಕಪ್ಪ ಬಂಡಿ ಇವರ ಮನೆಯ ಸಭಾಭವನದಲ್ಲಿ
ಗಜೇಂದ್ರಗಡ ಭಾರತೀಯ ಜನತಾ ಪಾರ್ಟಿ ರೋಣ ವಿಧಾನಸಭಾ ಮತ ಕ್ಷೇತ್ರ ಏರ್ಪಡಿಸಿದ, ಮತದಾರರಿಗೆ “ಕೃತಜ್ಞತಾ” ಸಭೆಯಲ್ಲಿ ಭಾಗವಹಿಸಲಿದ್ದಾರೆ.ಬಳಿಕ 1.30 ಕ್ಕೆ ಎಪಿಎಂಸಿಯಲ್ಲಿನ ಯಾರ್ಡ ನಲ್ಲಿ ಗದಗ ಪಂಚಮಸಾಲಿ ಸಮಾಜ ಸೇವಾ ಟ್ರಸ್ಟ್ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.4 ಗಂಟೆಗೆ ರಂಗಾವಧೂತ ನಗರದಲ್ಲಿ ‌ಶರಣ ಬಸವೇಶ್ವರ ನಗರದಲ್ಲಿ ಗದಗ ಭಾವಸಾರ ಕ್ಷತ್ರೀಯ,ಮಡಿವಾಳ ಸಮಾಜ ಏರ್ಪಡಿಸಿದ. ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಬಳಿಕ ಹುಬ್ಬಳ್ಳಿಗೆ ಆಗಮಿಸಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.‌

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial