ಹಾನಗಲ್ : ತಾಲೂಕಿನ ಜೀವನಾಡಿ ಮಳಗಿಯ ಧರ್ಮಾ ಜಲಾಶಯ ಉತ್ತಮ ಮಳೆಯಿಂದ ಮೈದುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಶಾಸಕರಾದ ಮಾನೆ ಶ್ರೀನಿವಾಸ ಅವರು ಸಾವಿರಾರು ಸಂಖ್ಯೆಯ ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತ ಜೊತೆಗೆ ಮಂತಗಿ ಗ್ರಾಮದಿಂದ ಪಾದಯಾತ್ರೆ ಆರಂಭಿಸಿದ್ದಾರೆ.
ಕಲ್ಲಹಕ್ಕಲ ಮಾರ್ಗವಾಗಿ ಪಾದಯಾತ್ರೆ ಮಳಗಿ ಧರ್ಮಾ ಜಲಾಶಯ ತಲುಪಲಿದೆ. ಬಳಿಕ ಗಂಗಾ ಪೂಜೆ ನೆರವೇರಿಸಿ, ರೈತರ ಸಂಕಷ್ಟಗಳ ಪರಿಹಾರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಸಲ್ಲಿಸಲಿದ್ದಾರೆ. ಪಾದಯಾತ್ರೆ ರೈತ ಸಮೂಹದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.