DistrictHaveriLatest

ಕೆನರಾ ಬ್ಯಾಂಕ್‌ನಿಂದ ಸಾಲ ವಿತರಣೆ: ಪೈನಾನ್ಸ್ ಹಾವಳಿಯಿಂದ ಉಳಿತಾಯ ಭಾವನೆ ಇಲ್ಲವಾಗಿದೆ

ಹಾನಗಲ್: ಖಾಸಗಿ ಮೈಕ್ರೋ ಪೈನಾನ್ಸ್ ಹಾವಳಿಯಿಂದ ಜನರಲ್ಲಿ ಉಳಿತಾಯ ಭಾವನೆ ಇಲ್ಲವಾಗಿದೆ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ಸಂಯೋಜಕ ಕಲ್ಲಪ್ಪ ನಾಯ್ಕರ ಹೇಳಿದರು.

ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ, ಹಾನಗಲ್ಲ ಕ್ಲಸ್ಟರ್ ವತಿಯಿಂದ ಸಾಲ ವಿತರಣೆ, ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪೈನಾನ್ಸ್ ಹಾವಳಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಪರಿಕಲ್ಪನೆ ಸಮುದಾಯದ ಜನರಲ್ಲಿ ಮರೆತು ಹೋಗುತ್ತಿದ್ದು ಉಳಿತಾಯ ಮನೋಭಾವನೆ ಇಲ್ಲದಂತಾಗಿದೆ. ಹಲವಾರು ವರ್ಷಗಳಿಂದ ಕೆಲವು ಹಳ್ಳಿಗಳಲ್ಲಿ
ಉಳಿತಾಯ ಮಾಡುತ್ತಿದ್ದರು. ಸಂಘಗಗಳನ್ನು ಮಾಡಿಕೊಂಡು ಆರ್ಥಿಕವಾಗಿ ಸಂಪನ್ಮೂಲ ಕ್ರೋಡಿಕರಿಸಿಕೊಳ್ಳುತ್ತಿದ್ದರು.ಅದೇ ಹಣವನ್ನು
ಕುಟುಂಬದ ಕಷ್ಟ ಕಾಲದಲ್ಲಿ ಬಳಿಸಿಕೊಳ್ಳುವ ಜೊತೆಗೆ ಇತರೆ ಮಹಿಳೆಯರಿಗೂ ನೆರವಾಗುತ್ತಿದ್ದರು ಎಂದರು.

ಸೀನಿಯರ್ ಮ್ಯಾನೇಜರ್ ರಾಜೇಶ್‌ ಮಾತನಾಡಿ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಂಬಂಧಿಸಿದಂತೆ
ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ವಿಶೇಷ ಸಾಲ ಸೌಲಭ್ಯಗಳು ಇದ್ದು ಅವುಗಳನ್ನು ಸದಸ್ಯರ ಉಳಿತಾಯದ ಆಧಾರದ
ಮೇಲೆ ಗುಂಪುಗಳಿಗೆ ಕುರಿ ಸಾಕಾಣಿಕೆ, ಹೈನುಗಾರಿಕೆ, ಸಣ್ಣ, ಮತ್ತು ದೊಡ್ಡ ಪ್ರಮಾಣದ ಸ್ವ
ಉದ್ಯೋಗಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಇದರಿಂದ ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮಹಿಳೆಯರು ತಿಳುವಳಿಕೆ ಹೊಂದಬಹುದಾಗಿದೆ ಮತ್ತು ಅಪಘಾತ ವಿಮೆ, ಆಟಡಲ್ ಪೇನ್ಸನ್
ಪಿ.ಎಮ್‌.ಇ.ಜೆ.ಪಿ ಯೋಜನೆಗಳಂಹ ಕೇಂದ್ರ ಸರಕಾರದ ಯೋಜನೆಗಳನ್ನು ಸಹ ಕೆನರಾ ಬ್ಯಾಂಕನಲ್ಲಿ
ಪಡೆದುಕೊಳ್ಳಬಹುದಾಗಿದೆ ಎಂದರು. ಹಾನಗಲ್ಲ. ಹನುಮಾಪುರ, ಗೆಜಿಹಳ್ಳಿ ಸೇರಿ 8 ಸಂಘಗಳಿಗೆ ತಲಾ
2 ಲಕ್ಷ ರೂಪಾಯಿಗಳ ಸಾಲ ಮಂಜೂರಾತಿ ಚೇಕ್‌ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಆರ್.ಓ ಹಾವೇರಿಯ ಡಿವಿಜನಲ್ ಮ್ಯಾನೇಜರ್. ಜಯಪ್ಪ ಕಾಸಿಂಗ, ಹಾನಗಲ್ಲ
ಕೆನರಾ ಬ್ಯಾಂಕ್ ಮ್ಯಾನೇಜರ್ ಸಿದ್ದಪ್ಪ, ಆದರ್ಶ ತಾಲೂಕು ಮಹಿಳಾ ಒಕ್ಕೂಟದ ಸದಸ್ಯ ಹವಾವತಿ ಕುನ್ನೂರ, ಪೀಲ್ಸ್ ಆಫೀಸ್ ಬಸವರಾಜ, ಶಿವರಾಜ, ಸಿಬ್ಬಂದಿಗಳಾದ ಶಿವಕುಮಾರ ಮಾಂಗೇನವರ, ಡಿಗ್ಗಪ್ಪ ಲಮಾಣಿ ಮಹಿಳಾ ಪ್ರಹಹಾಲು ಸಂಘದ ಸದಸ್ಯರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial