![](https://livekarnataka.com/wp-content/uploads/2024/08/IMG-20240803-WA0091-780x470.jpg)
ರಾಣೇಬೆನ್ನೂರು : ಜ್ಞಾನವಂತರಾಗಿ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ವಕೀಲ ವೃತ್ತಿಯು ಅತ್ಯಂತ ಶ್ರೇಷ್ಠ ವೃತ್ತಿಯಾಗಿದೆ ತಾಲೂಕಿನ ವಿದ್ಯಾರ್ಥಿಗಳಿಗೆ
ಕಾನೂನಿನ ಜ್ಞಾನವನ್ನು ನೀಡಲು ಕಾನೂನು ವಿದ್ಯಾಲಯವನ್ನು ಸ್ಥಾಪಿಸಲು ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ ಇಲ್ಲಿನ ಶಿಕ್ಷಕರ ಪರಿಶ್ರಮದಿಂದ ಇಂದು ನಮ್ಮ ಶಿಕ್ಷಣ ಸಂಸ್ಥೆ ಉತ್ತಮವಾಗಿ ಬೆಳೆದು ನಿಂತಿದೆ ಜೊತೆಗೆ ನಮ್ಮ ಹಲವಾರು ವಿದ್ಯಾರ್ಥಿಗಳೂ ಕೂಡ ವಕೀಲ ವೃತ್ತಿಯಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ ಇದು ನಮಗೆ ಸಾರ್ಥಕತೆಯ ನೀಡಿದೆ ಎಂದು ರಾ ತಾ ಶಿ ಸಂಸ್ಥೆಯ ಅಧ್ಯಕ್ಷ ಸುಭಾಸ್ ವಿ ಸಾವುಕಾರ ಹೇಳಿದರು , ಅವರು ಇಲ್ಲಿನ ಆರ್ ಟಿಇಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ 2023-24 ರ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ತೃತಿಯ ವರ್ಷದ ಕಾನೂನು ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ,
ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ ಮಾರುತೇಶ್ ಕೆಂಪಗೌಡ್ರ ಮಾತನಾಡಿ ಏನೇ ಸಮಸ್ಯೆಗಳು ಬಂದರೂ ಕಕ್ಷಿದಾರರಿಗೆ ಮಾಹಿತಿ ನೀಡಲು ಸಂಪೂರ್ಣ ಕಾನೂನಿನ ಜ್ಞಾನವನ್ನು ಹೊಂದಿದವರು ಮಾತ್ರ ನಿಜವಾದ ವಕೀಲರು , ವಕೀಲ ವೃತ್ತಿಯಲ್ಲಿ ಜನರಿಗೆ ತಪ್ಪು ಮಾಹಿತಿ ಕೊಡಬಾರದು ಕಕ್ಷಿದಾರರು ನಮ್ಮ ವೃತ್ತಿಯ ಮೇಲಿನ ನಂಬಿಕೆಯಿಂದ ನಮಗೆ ಖಾಲಿ ಹಾಳೆಯ ಮೇಲೆ ಸಹಿ ಹಾಕಿ ಕೊಟ್ಟಿರುತ್ತಾರೆ ಹಾಗಾಗಿ ವಕೀಲ ವೃತ್ತಿಯಲ್ಲಿ ಕಕ್ಷಿದಾರರನ್ನು ತೃಪ್ತಿ ಪಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು , ಸಮಾಜದಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಮಾತ್ರ ನಂಬಿಕೆ ಉಳಿದಿದೆ ನ್ಯಾಯಾಧೀಶರು ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುವಂತಾ ಮಾತುಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು .
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಉಪನ್ಯಾಸಕ ಬಿ ಆರ್ ರುದ್ರೇಶ್ ವಿದ್ಯೆಯ ಜೊತೆಗೆ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಿ ಒಮ್ಮೊಮ್ಮೆ ನ್ಯಾಯಾಲಯದಲ್ಲಿ ಏನು ಮಾತನಾಡಬೇಕು ಏನು ಮಾತನಾಡಬಾರದು ಎಂಬುದೂ ನಮ್ಮ ಕಕ್ಷಿದಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು
ಅಧ್ಯಕ್ಷೀಯ ಭಾಷಣ ಮಾಡಿದ ಪ್ರಾಂಶುಪಾಲರಾದ ಬಿ ರಮೇಶ್ ವೃತ್ತಿಯಲ್ಲಿ ದುಡ್ಡಿನ ಹಿಂದೆ ಹೋಗುವುದಕ್ಕಿಂತ ಜ್ಞಾನದ ಹಿಂದೆ ಬಿದ್ದಾಗ ಮಾತ್ರ ಯಶಸ್ವಿ ವಕೀಲರಾಗಲು ಸಾಧ್ಯವಿದೆ ಎಂದರು
ಉಪನ್ಯಾಸಕರಾದ ರೇಣುಕಾ ಮರಡೂರ್, ಶುಭಾಂಗಿ ದೇಶಪಾಂಡೆ ಹಾಗೂ ಅಧೀಕ್ಷಕರಾದ ಎಮ್ ಎ ಕಾಮದೋಡ್ ಸಿಬ್ಬಂದಿ ವಿಜಯಲಕ್ಷ್ಮಿ ಕೋಟಿ ಉಪಸ್ಥಿತರಿದ್ದರು. ಭೀಮಪ್ಪ ಲಮಾಣಿ, ಸ್ನೇಹ ಶೀಗಿಹಳ್ಳಿ ಸ್ವಾಗತಿಸಿದರು, ದ್ವಿತೀಯ ವರ್ಷದ ವಿದ್ಯಾರ್ಥಿನಿ ಮೇಘಾ ವಂದಿಸಿದರು . ಸೌಜನ್ಯ ಬಾದಾಮಿ ನಿರೂಪಿಸಿದರು