
ಹಾನಗಲ್ಲ : ಭಾರತ ಸ್ವಾತಂತ್ರೋತ್ಸವವನ್ನು ತಾಲೂಕಿನಲ್ಲಿ ಸಡಗರ – ಸಂಭ್ರಮದಿಂದ ಆಚರಣೆ ಮಾಡಲು ಸಕಲ ಸಿದ್ದತೆ ಮಾಡಿಕೊಳ್ಳುವಂತೆ ತಹಶಿಲ್ದಾರರ ಎಸ್ ರೇಣುಕಮ್ಮ ತಿಳಿಸಿದರು.
ಸೋಮವಾರ ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಅಧಿಕಾರಿಗಳ
ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಹರ್ ಘರ್ ತಿರಂಗಾ ಸೇರಿದಂತೆ ಎಲ್ಲ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಬೇಕು. ಮಕ್ಕಳು ಯುವಕರು ಸೇರಿದಂತೆ ಎಲ್ಲರಲ್ಲೂ ದೇಶಭಕ್ತಿ
ಜಾಗೃತಗೊಳಿಸಲು ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಣೆ ಮಾಡಬೇಕೆಂದರು.ಮಂಗಳವಾರ ತಾಲೂಕು ಆಡಳಿತದಿಂದ ಪಟ್ಟಣದ
ಕುಮಾರೇಶ್ವರ ಮಠದಿಂದ ತಾಲೂಕು ತಹಶೀಲ್ದಾರ ಕಛೇರಿವರೆಗೆ ಬೈಕ್ ರಾಲಿ ನಡೆಸಲಾಗುವುದು. ಇದರಲ್ಲಿ ಸರಕಾರಿ ಇಲಾಖೆಯ ಅಧಿಕಾರಿಗಳು ಬೈಕ್ ಚಾಲನಾ ಪರವಾನಗಿ ಇರುವ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಳ್ಳುವರು. ಸಂಜೆ 4 ಗಂಟೆಗೆ ಮತ್ತೆ ಕುಮಾರೇಶ್ವರ ಮಠದಿಂದ ತಾಲೂಕು ತಹಶೀಲ್ದಾರ ಕಛೇರಿವರೆಗೆ ತಿರಂಗಾ ಓಟ ಕಾರ್ಯಕ್ರಮ ನಡೆಸಲಾಗುವುದು. ಇದರಲ್ಲಿ ಶಾಲಾ ಕಾಲೇಜು, ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದರು.ಅಲ್ಲದೆ ಸಾರ್ವಜನಿಕರು ಎಲ್ಲರು ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಗೌರವ ಪೂರ್ವಕವಾಗಿ ಹಾರಿಸಿ ದೇಶಭಕ್ತಿ ಜಾಗೃತಗೊಳಿಸಲು ಸಹಕಾರಿಯಾಗುವಂತೆ ಮನವಿ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ವಿ.ಸಾಲಿಮಠ ಮಾತನಾಡಿ, ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ತಾಲೂಕಿನ ಶಾಲೆ ಕಾಲೇಜುಗಳಲ್ಲಿ ದೇಶ ಪ್ರೇಮ ಬೆಳೆಸುವ ರಸಪ್ರಶ್ನೆ,ಆಶುಭಾಷಣ, ಪ್ರಬಂಧ ಸೇರಿದಂತೆ ವಿವಿಧ
ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅಲ್ಲದೆ ರಾಲಿಗಳಲ್ಲಿ ಪಾಲ್ಗೊಳಲು ಬೇಕಾಗುವ ರಾಷ್ಟ್ರ ಧ್ವಜಗಳು ಬಿಆರ್‌ಸಿಯಲ್ಲಿ ಲಭ್ಯವಿದ್ದು ನಿಗದಿತ ಬೆಲೆ ಕೊಟ್ಟು ಕೊಂಡುಕೊಳಬಹುದಾಗಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ಶಿಕ್ಷಣ ಇಲಾಖೆ ಸಕ್ರಿಯವಾಗಿ ಪಾಲ್ಗೊಳ್ಳಲಿದೆ ಎಂದರು.

ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಮಾತನಾಡಿ, ತಾಲೂಕಿನ 40 ಗ್ರಾಮ
ಪಂಚಾಯತಿಗಳಲ್ಲಿಯೂ ಹರ ಘರ ತಿರಂಗಾ ಕಾರ್ಯಕ್ರಮ ಯಶಸ್ವಿಗೊಳಿಸಲು ಪಿಡಿಓ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲ ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ಸಿದ್ಧತೆ
ಮಾಡಿಕೊಂಡಿದ್ದಾರೆ. ಎಲ್ಲ ಗ್ರಾಮಗಳಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸುತ್ತೇವೆ ಎಂದರು.
ಪುರಸಭೆ ಮುಖ್ಯಾಧಿಕಾರಿ ವೈ.ಕೆ.ಜಗದಕೀಶ, ಪ್ರಾಚಾರ್ಯ ಡಾ.ಎನ್.ಸದಾಶಿವಪ್ಪ, ಸಾಹಿತಿ
ಪ್ರೊ.ಮಾರುತಿ ಶಿಡ್ಲಾಪುರ, ನ್ಯಾಯವಾದಿ ಎಸ್.ಎಂ.ಕೋತಂಬರಿ, ಹನುಮಂತಪ್ಪ ಭೋವಿ, ಮಲ್ಲೇಶಪ್ಪ ಪರಪ್ಪನವರ, ಮಹಾಲಿಂಗಪ್ಪ.. ಬಿದರಮಳಿ, ಮಂಜುನಾಥ ಹರಿಜನ, ರಾಜು ರಾಗಿಕೊಪ್ಪ, ನಾಗಪ್ಪ ಬಿದರಗಡ್ಡಿ ಹಾಜರಿದ್ದರು.